ಸೌಪರ್ಣಿಕಾ ಹೊಳೆಯಲ್ಲಿ ನೀರುಪಾಲು

drowning
Published on

ಗಂಗೊಳ್ಳಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಹಡವು ಗ್ರಾಮದ ಅತ್ತಿಕೋಣೆ ಸೌಪರ್ಣಿಕಾ ಹೊಳೆಯ ತೀರದಲ್ಲಿ ಮೀನಿಗಾಗಿ ಬಲೆ ಹಾಕುತ್ತಿದ್ದಾಗ
ಕಾಲು ಜಾರಿ ಸ್ಥಳೀಯ ಹಡವು ಗ್ರಾಮದ ತೆಂಕಿನ ಮನೆ ನಿವಾಸಿ ನಾರಾಯಣ ದೇವಾಡಿಗ (55) ನೀರುಪಾಲಾಗಿದ್ದಾರೆ.

ಸಾಧಾರಣ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಗಡ್ಡ, 5 ಅಡಿ 5 ಇಂಚು ಎತ್ತರ ಇರುವ ಇವರು ಬೂದು ಬಣ್ಣದ ತುಂಬು ತೋಳಿನ ಶರ್ಟ್ ಕಪ್ಪು ಬಿಳಿ ಬಣ್ಣ ಮಿಶ್ರಿತ ಪಂಚೆ ಧರಿಸಿದ್ದರು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಕಾಟ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net