ಧುಮ್ಮಿಕಿ ಹರಿಯುವ ನೀರಲ್ಲಿ ಮೀನು ಹಿಡಿಯಲು ಹೋಗಿ ಫಜೀತಿ ತಂದುಕೊಂಡ! ವಿಡಿಯೋ ವೈರಲ್​

ಮಳೆ ನೀರಲ್ಲಿ ಮೀನು ಹಿಡಿಯಲು ಹೋಗಿ ತಂದುಕೊಂಡ ಫಜೀತಿ ಅಷ್ಟಿಷ್ಟಲ್ಲ! - youtube
Published on

ದಾವಣಗೆರೆ: ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಅಪಾಯವನ್ನೂ ಲೆಕ್ಕಿಸದೆ ಮೀನು ಹಿಡಿಯಲು ಹೋದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವಷ್ಟರಲ್ಲಿ ಅದೃಷ್ಟವಶಾತ್​ ಪಾರಾದ ದೃಶ್ಯ ವೈರಲ್​ ಆಗಿದೆ.

ಭಾರಿ ಮಳೆಯಿಂದಾಗಿ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ತುಂಬಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಡ್ಯಾಂನ ಎಲ್ಲ ಗೇಟ್ ಓಪನ್ ಮಾಡಿದ್ದು, ಜೋರಾಗಿ ಹರಿಯುತ್ತಿರುವ ನೀರಲ್ಲಿ ಮೀನು ಹಿಡಿಯಲು ಹೋದ ಯುವಕ ಕೆಲ ದೂರ ಕೊಚ್ಚಿಹೋದ. ಸ್ವಲ್ಪ ಹೊತ್ತು ಈಜಾಡಿ ಪ್ರಾಣ ಉಳಿಸಿಕೊಂಡ ಯುವಕನತ್ತ ಹಗ್ಗ ಬಿಟ್ಟು ಸ್ಥಳೀಯರು ಮೇಲಕ್ಕೆ ಎಳೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net