ಬಲೆಗೆ ಬಿದ್ದ ಭಾರಿ ಗಾತ್ರದ ಹದ್ದು ಜಾತಿಯ ಮೀನು!

New Project(11)
Published on

ಕಂಪ್ಲಿ(ಬಳ್ಳಾರಿ): ಇಲ್ಲಿನ ತುಂಗಭದ್ರಾ ನದಿಯಲ್ಲಿ ಭಾರಿ ಗಾತ್ರದ, ಹದ್ದು ಜಾತಿಯ ಮೀನೊಂದು ಮೀನುಗಾರರ ಬಲೆಗೆ ಮಂಗಳವಾರ ಬಿದ್ದಿದೆ. ಮಾರುಕಟ್ಟೆಗೆ ತರುತ್ತಿದ್ದಂತೆ ಮೀನು ಮಾರಾಟವಾಗಿದೆ.

ಯುವಕ ಶಂಭು ಎಂಬಾತ ನದಿಯ ಜಾಕ್​ವೆಲ್​ ಮೇಲ್ಭಾಗದಲ್ಲಿ ಬಲೆ ಹಾಕಿದ್ದರು. ಹದ್ದು ಜಾತಿಯ, 20 ಕೆಜಿ ಭಾರದ ಮೀನು ಬಲೆಗೆ ಬಿದ್ದಿದೆ. ಮಾರುಕಟ್ಟೆಗೆ ತರುತ್ತಿದ್ದಂತೆ 300 ರೂ. ಕೆ.ಜಿ.ಯಂತೆ ಮಾರಾಟವಾಯಿತು.

ಹೊಸಪೇಟೆ ಸಕ್ಕರೆ ಕಾರ್ಖಾನೆಯೊಂದರ ಮಲಾಸೀಸ್​ ನದಿಗೆ ಸೇರುವ ಮುನ್ನಾ 50-60 ಕೆಜಿ ತೂಕದ ಮೀನು ಬೇಟೆಯಾಡುತ್ತಿದ್ದೆವು. ನಂತರ ನದಿಗೆ ಮಲಾಸೀಸ್​ ಸೇರಿ ನೀರು ಕಲುಷಿತಗೊಂಡ ನಂತರ ಹದಿನೈದು ಕೆಜಿ ತನಕ ಮೀನು ದೊರಕುತ್ತಿದ್ದವು. ಇದೀಗ 20 ಕೆಜಿ ತೂಕದ ಸುಮಾರು ಮೀನು ಬಲೆಗೆ ಬಿದ್ದಿರುವುದು ವಿಶೇಷ ಎಂದು ಕೋಟೆ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್​.ಆರ್​.ಚಿನ್ನರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net