ದೀಪಾವಳಿಗೂ ಮುನ್ನವೇ ಪಟಾಕಿ ಸಿಡಿತ: ಬಾಲಕನ ಎರಡೂ ಕಣ್ಣುಗಳಿಗೆ ಹಾನಿ

DEVALI PATAKI
Published on

ಬೆಂಗಳೂರು: ದೀಪಾವಳಿಗೂ ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪಟಾಕಿ ಅವಘಡ ಸಂಭವಿಸಿದ್ದು, 10 ವರ್ಷದ ಬಾಲಕನೊಬ್ಬನ ಎರಡೂ ಕಣ್ಣುಗಳಿಗೆ ಹಾನಿಯಾಗಿದೆ.

ಪಾದರಾಯನಪುರದ 10 ವರ್ಷದ ಬಾಲಕ ಮೊಹಮದ್​ ಎಂಬಾತನ ಕಣ್ಣುಗಳಿಗೆ ಹಾನಿಯಾಗಿದೆ. ಭಾನುವಾರ ಸಂಜೆ ಮನೆ ಬಳಿ ಬೇರೆಯವರು ಪಟಾಕಿ ಹಚ್ಚುತ್ತಿದ್ದರು. ಅದನ್ನು ನೋಡುತ್ತಾ ನಿಂತಿದ್ದ ಮೊಹಮದ್​ಗೆ ಪಟಾಕಿಯ ಕಿಡಿ ಹಾರಿ, ಕಣ್ಣು, ಕಣ್ಣಿನ ಸುತ್ತಲ ಚರ್ಮ, ಕೂದಲು ಸುಟ್ಟಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಮೊಹಮದ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪಟಾಕಿಯಿಂದಾಗಿ ಪ್ರತಿವರ್ಷ ಅವಘಡ ಸಂಭವಿಸುತ್ತಲೇ ಇದೆ. ಪಟಾಕಿ ಅವಘಡಕ್ಕೆ ತುತ್ತಾಗುವ ಬಹುತೇಕರು ಶಾಶ್ವತ ಅಂಧತ್ವ ಇಲ್ಲವೇ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ಜನ ಎಚ್ಚೆತ್ತುಕೊಳ್ಳಬೇಕು. ಪಟಾಕಿ ಬದಲು ಹಣತೆ ಹಚ್ಚಿ ಖುಷಿ ಪಡಲು ಯತ್ನಿಸಿ. ಪಟಾಕಿ ಸಿಡಿಸಲೇಬೇಕು ಅನ್ನಿಸಿದ್ರೆ ಹಸಿರು ಪಟಾಕಿ ಹಚ್ಚಬಹುದು. ಜನರ ಸಂಚಾರ ಇಲ್ಲದ, ಖಾಲಿ ಜಾಗದಲ್ಲಿ ಹಚ್ಚಿ. ಚಿಕ್ಕ ಮಕ್ಕಳ ಕೈಗೆ ಪಟಾಕಿಯನ್ನ ಕೊಡಲೇ ಬೇಡಿ. ಮನೆ ಮತ್ತು ವಾಹನ ಇರುವ ಜಾಗದಲ್ಲಿ ಪಟಾಕಿ ಹಚ್ಚಲೇ ಬೇಡಿ. ಕೈಯಲ್ಲಿ ಪಟಾಕಿ ಹಿಡಿದು ಹಚ್ಚುವ ಹುಚ್ಚು ಸಹಾಸ ಬೇಡ. ಮುಖವನ್ನ ದೂರ ಇಟ್ಟುಕೊಳ್ಳಿ. ಸುಟ್ಟ ಪಟಾಕಿಗಳನ್ನ ಮನಬಂದಂತೆ ಎಸೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net