ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ

30 HANUR 2 A
ಸಿಡಿಮದ್ದನ್ನು ಅಡಗಿಸಿಟ್ಟಿದ್ದ ಮುಸುಕಿನ ಜೋಳದ ಸಂಡು.
Published on

ಹನೂರು: ಪಟ್ಟಣದಿಂದ ಅಜ್ಜೀಪುರಕ್ಕೆ ತೆರಳುವ ಮಾರ್ಗದ ರಸ್ತೆ ಬದಿಯಲ್ಲಿ ಸೋಮವಾರ ಕಿಡಿಗೇಡಿಗಳು ಅಡಗಿಸಿಟ್ಟದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರಗೊಂಡಿದೆ.

ಪಟ್ಟಣದ ಕಾರ್ತಿಕ ಎಂಬುವರು ಬೆಳಗ್ಗೆ ರಸ್ತೆ ಬದಿಯ ಮಾಳದಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಆದರೆ ಇಲ್ಲಿ ಕಿಡಿಗೇಡಿಗಳು ಕಾಡು ಹಂದಿಯನ್ನು ಬೇಟೆಯಾಡುವ ಉದ್ದೇಶದಿಂದ ಮುಸುಕಿನ ಜೋಳದ ಸಂಡನ್ನು ಅಲ್ಲಲ್ಲಿ ಸುರಿದು ಸಿಡಿಮದ್ದನ್ನು ಅಡಗಿಸಿ ಇಟ್ಟಿದ್ದರು ಎನ್ನಲಾಗಿದೆ. ಆದರೆ ಹಸು ಮುಸುಕಿನ ಜೋಳದ ಸಂಡನ್ನು ತಿನ್ನಲು ಹೋದಾಗ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಬಾಯಿ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಈ ದುಷ್ಕೃತ್ಯದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಡಿವಾಣಕ್ಕೆ ಒತ್ತಾಯ: ಈ ಭಾಗದಲ್ಲಿ ಕಾಡು ಹಂದಿಗಳು ಬರುತ್ತವೆ. ಹಾಗಾಗಿ ಕೆಲ ಕಿಡಿಗೇಡಿಗಳು ಹಂದಿಗಳನ್ನು ಬೇಟೆಯಾಡುವ ಸಲುವಾಗಿ ಸಿಡಿಮದ್ದುಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರ ಪರಿಣಾಮ ಅಮಾಯಕ ಹಸುವಿನ ಬಾಯಿ ಛಿದ್ರವಾಗಿದೆ. ಆದ್ದರಿಂದ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net