

ಮೈಸೂರು: ಸೆಂಟ್ರಿಂಗ್ ಪದಾರ್ಥಗಳನ್ನು ಇರಿಸಿದ್ದ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂ. ವೌಲ್ಯದ ಮರದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಗೌಸಿಯಾನಗರದ ಈದ್ಗಾ ಮೈದಾನದ ಬಳಿ ಇರುವ ಗೋದಾಮಿನಲ್ಲಿದ ಪದಾರ್ಥಗಳು ಭಾನುವಾರ ತಡರಾತ್ರಿ ಬೆಂಕಿ ಬಿದ್ದಿದ್ದು, ತಕ್ಷಣ ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋದಾಮಿನ ಮಾಲೀಕರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.