ಧಾರವಾಡ ಸಿಬಿಟಿ ಬಳಿಯ ಕಿರಾಣಿ ಅಂಗಡಿಗೆ ಬೆಂಕಿ

18 vikram 12
Published on

ಧಾರವಾಡ: ನಗರದ ಸಿಬಿಟಿ ಬಳಿಯ ಕಿರಾಣಿ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ದವಸ ಧಾನ್ಯ, ಇತರ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ವಿನಯ ಆಕಳವಾಡಿ ಎಂಬುವವರಿಗೆ ಸೇರಿದ ಆಕಳವಾಡಿ ಕಿರಾಣಿ ಅಂಗಡಿಯಲ್ಲಿ ಅವಘಡ ನಡೆದಿದೆ. ಬೆಳಗಿನ ಜಾವದಲ್ಲಿ ವಿದ್ಯುತ್ ಸ್ಪರ್ಷದಿಂದ ಬೆಂಕಿ ಹೊತ್ತಿಕೊಂಡಿದೆ. ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಅಂಗಡಿಗೆ ಆವರಿಸಿದ್ದನ್ನು ಕಂಡ ಸ್ಥಳೀಯರು ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ನರೇಂದ್ರ ಹಿರೇಕೆರೆ ಸುಮಾರು 100 ಎಕರೆಯಷ್ಟು ವಿಸ್ತಾರವಾಗಿದೆ. ವಿಶಾಲವಾದ ಜಲಾನಯನ ಪ್ರದೇಶ ಹೊಂದಿದೆ. ಮೇಲ್ಭಾಗದ ನೀರೆಲ್ಲ ಕೆರೆ ಸೇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net