ಬೆಂಗಳೂರಲ್ಲಿ ಮತ್ತೊಂದು ಬೆಂಕಿ ಅವಘಡ: ಛಿದ್ರಗೊಂಡ ದೇಹಗಳು, ಇಬ್ಬರು ದುರ್ಮರಣ

1169369
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ದೇಹ ಛಿದ್ರಛಿದ್ರವಾಗಿ ಸುಮಾರು ದೂರದವರೆಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಸ್ಥಳೀಯರನ್ನ ಬೆಚ್ಚಿಬೀಳಿಸಿದೆ.

ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿಯ ಆಶ್ರಿತ್ ಶೆಲ್ಟರ್ಸ್​ ಅಪಾರ್ಟ್​ಮೆಂಟ್​ನಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಮಾಸುವ ಮುನ್ನವೇ, ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪತಿ ಅಗ್ರಹಾರದ ಅಂಗಡಿಯೊಂದರಲ್ಲಿ ಹೈಡ್ರೋಲಿಕ್ ಕಂಪ್ರೈಸರ್ ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆ ತಾಗಿ ಪಾಟಾಕಿ ಬಾಕ್ಸ್​ಗಳೂ ಸ್ಫೋಟಗೊಂಡು ಧಗಧಗ ಹೊತ್ತಿ ಉರಿದಿದೆ. ಈ ದುರಂತ ಗುರುವಾರ ಮಧ್ಯಾಹ್ನ 12.10ರ ಸುಮಾರಿಗೆ ಸಂಭವಿಸಿದ್ದು, ಸುತ್ತಮುತ್ತಲ ಕಟ್ಟಡಗಳಿಗೂ ಹಾನಿ ಉಂಟಾಗಿದೆ. ಮೃತರ ಪೈಕಿ ಒಬ್ಬನನ್ನು ತಮಿಳುನಾಡು ಮೂಲದ ಮನೋಹರ್ ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net