ಉದ್ಯಮಿ ಪುತ್ರನ ಮೇಲೆ ಹಲ್ಲೆ: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯನ ವಿರುದ್ಧ ಎಫ್‌ಐಆರ್

manappa
Published on

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನನ್ನ ಮೇಲೆ ಆಂಜನೇಯ ವಜ್ಜಲ್ ಕಳೆದ ಭಾನುವಾರ ಬೆಂಗಳೂರಿನ ವಸಂತನಗರದ ಎಂಬೆಸಿ ಅಪಾರ್ಟ್​ಮೆಂಟ್​ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಉದ್ಯಮಿ ದೀಪಕ್ ರೈ ಎಂಬುವರ ಪುತ್ರ ವಿಕ್ರಮ್​ ರೈ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಅಂದು ಸ್ನೇಹಿತನನ್ನ ಬಿಡಲು ಹ್ಯಾಬಿಟೆಟ್ ಅಪಾರ್ಟ್ಮೆಂಟ್ ಬಳಿ ಬಂದಿದ್ದೆ, ಆ ವೇಳೆ ಪಾರ್ಕಿಂಗ್​ ವಿಚಾರವಾಗಿ ಆ ವೇಳೆ ಬರೋಬ್ಬರಿ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು 10 ರಿಂದ 15 ಹುಡುಗರನ್ನ ನನ್ನ ಮೇಲೆ ಮಾಜಿ ಶಾಸಕನ ಪುತ್ರ ಹಲ್ಲೆ ಮಾಡಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಎಫ್​ಐಆರ್​ ದಾಖಲಿಗೂ ಮುನ್ನ ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಶಾಸಕ ಮಾನಪ್ಪ ವಜ್ಜಲ್, ನನ್ನ ಮಗ ವಸಂತನಗರದ ಮನೆಯ ಮುಂದೆ ನಿಂತಾಗ ಕುಡಿದಿದ್ದ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿ ಹೋಗಿದ್ದಾನೆ. ಮತ್ತೆ ಬಂದು ಗಲಾಟೆಗೆ ಮುಂದಾಗಿದ್ದಾನೆ, ಆಗ ಮಾತಿಗೆ ಮಾತು ಬೆಳೆದಿದೆ. ಮದ್ಯಪಾನ ಮಾಡಿದ್ದ ಆತ ತಾನೇ ಗಾಯ ಮಾಡಿಕೊಂಡಿದ್ದು, ಸಣ್ಣ ಗಾಯವಾಗಿದೆ. ನನ್ನ ಮಗನ ಕೈಯಲ್ಲಿ ಏನೂ ಇರಲಿಲ್ಲ, ಅವನು ತುಂಬಾ ಸಣ್ಣವನು ಎಂದು ಸ್ಪಷ್ಟನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net