

ಶಿರಸಿ: ಸಂಚಾರ ನಿಯಮ ಉಲ್ಲಂಸುವವರಿಗೆ ಶಿರಸಿ ಶಹರ ಹಾಗೂ ಮಾರುಕಟ್ಟೆ ಠಾಣೆ ಪೊಲೀಸರು ಮಂಗಳವಾರ ಶಾಕ್ ನೀಡಿದ್ದಾರೆ. ಒಂದೇ ದಿನ 47 ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ 30,500 ರೂ. ದಂಡ ಆಕರಿಸಿದ್ದಾರೆ. ಮೊಬೈಲ್ ನೋಡಿಕೊಂಡು ಲಾರಿ ಚಾಲನೆ ಮಾಡುತ್ತಿದ್ದ ಲಾರಿ ಚಾಲಕನಿಗೆ 5 ಸಾವಿರ ರೂ. ದಂಡ ವಿಧಿಸಿದ್ದು, ಚಾಲನಾ ಪರವಾನಗಿ ರದ್ದತಿಗೆ ಆರ್‌ಟಿಒಗೆ ಪತ್ರ ಬರೆಯಲಾಗಿದೆ. ಅಲ್ಲದೆ, ಹೆಲ್ಮೆಟ್ ಇಲ್ಲದವರ ಮೇಲೆ 40, ಇನ್‌ವೇ ದಲ್ಲಿ ಓಡಾಡುವವರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು. ಪಾರ್ಕಿಂಗ್ ನಿಯಮ ಉಲ್ಲಂಸಿದ ವಾಹನಗಳ ಮೇಲೆ ಟೋಯಿಂಗ್ ವಾಹನದ ಮೂಲಕ ಕೊಂಡೊಯ್ಯಲಾಯಿತು.