ಬೈಕ್ ವೀಲಿಂಗ್ ಮಾಡಿದವಗೆ 15,500 ರೂ. ದಂಡ !

dist Court building
ಶಿವಮೊಗ್ಗದ ನ್ಯಾಯಾಲಯ
Published on

ಶಿವಮೊಗ್ಗ: ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ ಸವಾರನಿಗೆ ಶಿವಮೊಗ್ಗದ ನ್ಯಾಯಾಲಯವು 15,500 ರೂ. ದಂಡ ವಿಧಿಸಿದೆ.

ವೀಲಿಂಗ್ ಮಾಡುವ ವಿಡಿಯೋ ಚಿತ್ರೀಕರಿಸಲು ಮತ್ತೊಂದು ಬೈಕ್‌ನಲ್ಲಿ ತೆರಳಿದ್ದ ಯುವಕನಿಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ.
ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದ. ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆಯ ಮುಖ್ಯ ಪೇದೆ ಸಂದೀಪ್ ಅವರು ಬೈಕ್‌ಗಳನ್ನು ಪತ್ತೆ ಹಚ್ಚಿದ್ದರು. ತನಿಖೆ ನಡೆಸಿದ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವೀಲಿಂಗ್ ಮಾಡಿದ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದ ಬೈಕ್ ಸವಾರನಿಗೆ ದಂಡ ವಿಧಿಸಿದೆ. ವೀಲಿಂಗ್ ಮಾಡಿದ್ದ ಬೈಕ್ ಸವಾರ ರೇಸಿಂಗ್, ಡಿಎಲ್ ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಬೈಕ್‌ನಲ್ಲಿ ಸೈಡ್ ಮಿರರ್‌ಗಳಿಲ್ಲದಿರುವುದಕ್ಕೆ ಬಾರಿ ದಂಡ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net