ಬ್ರಿಟಾನಿಯ ಕಂಪನಿಗೆ ದಂಡ

britaniya
Published on

ಮಡಿಕೇರಿ: ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಗ್ರಾಹಕರೊಬ್ಬರು ದೂರು ನೀಡಿದ ಪರಿಣಾಮ ಕೊಡಗು ಜಿಲ್ಲಾ ಗ್ರಾಹಕರ ವೇದಿಕೆ ಪ್ರಕರಣವನ್ನು ದಾಖಲಿಸಿಕೊಂಡು ಎರಡು ಕಡೆಯ ವಾದ ಆಲಿಸಿ ತೂಕದಲ್ಲಿ ವಂಚಿಸಿರುವುದು ದೃಢಪಟ್ಟಿದ್ದರಿಂದ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗ ಬ್ರಿಟಾನಿಯ ಇಂಡಸ್ಟ್ರೀಸ್‌ಗೆ ದಂಡ ವಿಧಿಸಿ ಆದೇಶ ಹೊರಡಿಸಿದ ಘಟನೆ ನಡೆದಿದೆ.


ಎಂ.ಇ.ಹಾಲಿ ರವರು ಗೋಣಿಕೊಪ್ಪ ಪಟ್ಟಣದಲ್ಲಿ ಮಾರಿಗೋಲ್ಡ್ ಬಿಸ್ಕೇಟನ್ನು ಖರೀದಿಸಿದ್ದರು. ಬಿಸ್ಕೇಟ್‌ಗಳು ಕಡಿಮೆ ಇರುವುದರಿಂದ ತೂಕ ಮಾಡಿಸಿ ನೋಡಿದಾಗ ೧೦೦ ಗ್ರಾಂ ಇರುವ ಬದಲು ೮೨ ಗ್ರಾಂ ಇತ್ತು. ಈ ಹಿನ್ನೆಲೆ ದೂರನ್ನು ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸಲ್ಲಿಸಿದ್ದರು.


ನ್ಯಾಯಾಲಯವು ಎರಡು ಕಡೆ ವಾದಗಳನ್ನು ಆಲಿಸಿದಾಗ ಬ್ರಿಟಾನಿಯ ಇಂಡಸ್ಟ್ರೀಸ್‌ರವರು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿರುವುದು ಸಾಬಿತು ಆಗಿರುತ್ತದೆ. ಆದ್ದರಿಂದ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗವು ದೂರುದಾರರಿಗೆ ಬ್ರಿಟಾನಿಯ ಇಂಡಸ್ಟ್ರೀಸ್ ಇವರಿಂದ ರೂ.೧೦ ಸಾವಿರಗಳ ಪರಿಹಾರ ಮೊತ್ತವಾಗಿ ಮತ್ತು ರೂ.೨೦ ಸಾವಿರ ಗಳು ಮಾನಸಿಕ ವೇದನೆಗಾಗಿ ಮತ್ತು ಖರ್ಚು ವೆಚ್ಚಗಳಿಗಾಗಿ ಪಾವತಿಸಲು ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net