ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

corona malashri ramu
Published on

ಬೆಂಗಳೂರು: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ಕೋಟಿ ರಾಮು ಅವರು ನಿನ್ನೆ(ಸೋಮವಾರ) ರಾತ್ರಿ ನಿಧನರಾದರು. ಕರೊನಾ ಸೋಂಕಿನಿಂದ ಮೃತಪಟ್ಟಿದ್ದರು ಎಂದೇ ಹೇಳಲಾಗಿತ್ತು. ಆದರೀಗ ಸಾವಿಗೆ ಕಾರಣ ಬೇರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರಿಯ ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಪತಿ ಮೃತಪಟ್ಟದ್ದು ಕೋವಿಡ್​ನಿಂದಲ್ಲ, ಫುಡ್​ ಪಾಯಿಸನ್​ನಿಂದ ಎನ್ನಲಾಗಿದೆ. ರಾಮು ಅವರ ಅಂತ್ಯಕ್ರಿಯೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ನೆರವೇರಲಿದೆ. ಬೆಂಗಳೂರಿನಿಂದ ಹುಟ್ಟೂರಿನತ್ತ ರಾಮು ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಗಿದ್ದು, ಮಾಲಾಶ್ರೀ ಹಾಗೂ ಅವರ ಕುಟುಂಬದ ಕೆಲವರು ಮಾತ್ರ ಜತೆಯಲ್ಲಿದ್ದಾರೆ.

ಒಂದು ವಾರದ ಹಿಂದೆ ಕೋಟಿ ರಾಮು ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿದಾಖಲಾಗಿದ್ದರು. ಆದರೆ ನಿನ್ನೆ ಫುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾರೆ. ಆರಂಭದಲ್ಲಿ ಕರೊನಾ ಸೋಂಕಿನಿಂದಲೇ ರಾಮು ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net