

ಮೈಸೂರು: ಮೊಬೈಲ್ ಬಳಸುತ್ತಿದ್ದ ಮಗನ ವರ್ತನೆಯಿಂದ ಬೇಸತ್ತು ತಂದೆ ಮಾಡಿದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಬನ್ನಿಮಂಟಪ ಬಡಾವಣೆಯ ಉಮೇದ್ (22) ಕೊಲೆಯಾದವನು. ಕೊಲೆ ಆರೋಪದಡಿ ತದೆ ಅಸ್ಲಂ ಪಾಷನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಗ ಉಮೇದ್ ಮನೆಯಲ್ಲಿ ತಾಯಿಯ ಮೊಬೈಲ್ ತೆಗೆದುಕೊಂಡು ಮಂಗಳವಾರ ರಾತ್ರಿ ನೋಡುತ್ತಿದ್ದನೆನ್ನಲಾಗಿದೆ. ಈ ವೇಳೆ ತಂದೆ ಅಸ್ಲಂ ಪಾಷ ಆಕ್ಷೇಪವ್ಯಕ್ತಪಡಿಸಿ ಮೊಬೈಲ್ ನೋಡದಂತೆ ಎಚ್ಚರಿಕೆ ನೀಡಿದರೂ ಮಗ ಕೇಳದೆ ಮೊಬೈಲ್ ನೋಡುತ್ತಲೇ ಇದ್ದನೆನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದು ಬೈದಾಗ ಮಾತಿಗೆ ಮಾತು ಬೆಳೆದು ತಂದೆ ಚಾಕುವಿನಿಂದ ಮಗನಿಗೆ ಇರಿದನೆನ್ನಲಾಗಿದೆ.
ಮೃತರ ತಾಯಿ ನೀಡಿದ ದೂರಿನ ಮೇರೆಗೆ ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.