

ಮೂಡಲಗಿ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದ ಘಟನೆ ಗುರುವಾರದಂದು ತಡರಾತ್ರಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.
ರಾಮ ನವಮಿ ದಿನ ನಡೆದ ಸಣ್ಣ ಗಲಾಟೆ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುಗೆ ಗಲಾಟೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಲಾಂಗು ಮಚ್ಚು ಹಿಡಿದುಕೊಂಡು ಯುವಕರು ದಾಳಿಗೆ ಬಂದ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಹಳ್ಳೂರ ಗುರ್ಲಾಪುರ ಗ್ರಾಮದ ಯುವಕರ ನಡುವೆ ಗಲಾಟೆ ಆಗಿದೆ ಎನ್ನಾಗಿದೆ.
ಕೈಯಲ್ಲಿ ಲಾಂಗು ಮಚ್ಚು ಹಿಡಿದು ದಾಳಿಗೆ ಬಂದಿದ್ದ ಕೆಲ ಯುವಕನ್ನು ಹಿಡಿದು ಸ್ಥಳೀಯರೇ ವಿಕೋಪಕ್ಕೆ ಹೋಗಿ ಅನಾಹುತ ಆಗುವುದದನ್ನು ತಡೆದಿದ್ದಾರೆ.
ರಾಮ ನವಮಿ ದಿವಸ ಡಿಜೆ ವೇಳೆ ಧ್ವಜದ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅದರ ಸೇಡು ತೀರಿಸಿಕೊಳ್ಳಲು ಯುವಕರ ಗುಂಪು ಹಳ್ಳೂರ ಗ್ರಾಮಕ್ಕೆ ಬಂದಿದೆ. ಹಲ್ಲೆ ಮಾಡುವ ಸಂದರ್ಭದಲ್ಲಿ ಬಿಡಿಸಲು ಹೋದ ಸ್ಥಳೀಯರಿಗೂ ಗಾಯಗಳಾಗಿವೆ. ಎಸ್ಪಿ ಗ್ಯಾಂಗ್ ಎಂಬ ವಾಟ್ಸಪ್ ಗ್ರೂಪ್ ಮಾಡಿಕೊಂಡು ಯುವಕರ ತಂಡ ಅಟ್ಟಹಾಸ ಮೆರೆದಿದೆ. ಗಲಾಟೆಯಾಗುತ್ತಿದ್ದಂತೆ ಹಳ್ಳೂರ ಗ್ರಾಮಕ್ಕೆ ಭೇಟಿ ಯುವಕರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಪೊಲೀಸರು ಶಾಂತಗೊಳಿಸಿದ್ದಾರೆ.
ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ಲಾಂಗು ಮಚ್ಚು ಪ್ರದರ್ಶನ ಮಾಡಿ ತಡೆಯಲು ಬಂದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.