ಎರಡು ಕುಟುಂಬದ ನಡುವೆ ಹೊಡೆದಾಟ

A fight between two families
ಮುದ್ದೇಬಿಹಾಳ ತಾಲೂಕಿನ ವೀರೇಶನಗರ ಗ್ರಾಮವ್ಯಾಪ್ತಿಯ ಜಮೀನಿನಲ್ಲಿ ಈರಪ್ಪ ಕೋರಿ ದೇವಮ್ಮ ಲೊಟಗೇರಿಯ ತಲೆಗೂದಲು ಹಿಡಿದು ಎಳೆದಾಡಿ ಆಕೆಯ ಬೆನ್ನ ಮೇಲೆ ಕಾಲಿನಿಂದ ಒದೆಯುತ್ತಿರುವ ದೃಶ್ಯ.
Published on

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ವೀರೇಶನಗರ ಗ್ರಾಮದ ಜಮೀನೊಂದರಲ್ಲಿ ಒಂದೇ ಸಮುದಾಯಕ್ಕೆ ಸೇರಿದ, ವರಸೆಯಲ್ಲಿ ಬಂಧುಗಳಾಗುವ ಕೋರಿ ಕುಟುಂಬದ ಅಮರಪ್ಪ ಕೋರಿ ಮತ್ತು ಅಮರಪ್ಪನ ಸಹೋದರ ಈರಪ್ಪ ಕೋರಿ ಸೇರಿ ಲೊಟಗೇರಿ ಕುಟುಂಬದ ಸಣ್ಣಹನುಮಂತ ಲೊಟಗೇರಿ ಮತ್ತು ಸಣ್ಣಹನುಮಂತನ ಪತ್ನಿ ದೇವಮ್ಮ ಲೊಟಗೇರಿ ಅವರನ್ನು ಎಳೆದಾಡಿ ಅವರ ಮೇಲೆ ಸೋಮವಾರ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಈ ಕುರಿತಾದ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ಸಣ್ಣಹನುಮಂತ ಮತ್ತು ದೇವಮ್ಮ ಇಬ್ಬರೂ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ದೇವಮ್ಮಳ ಸಹೋದರಿ ಲಕ್ಷಿ$್ಮ ನೀಡಿದ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಸಂಜೆ ಪ್ರಕರಣ ದಾಖಲಾಗಿದೆ. ಪಿಎಸ್​ಐ ಸಂಜಯ್​ ತಿಪ್ಪರಡ್ಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಜಮೀನಿಗೆ ಬದು ನಿರ್ಮಿಸಿ ಮಳೆ ನೀರನ್ನು ಬೇರೆಡೆ ಹರಿಸುವ ಸಂಬಂಧ ಎರಡೂ ಕುಟುಂಬಗಳ ನಡುವೆ ಮೊದಲಿನಿಂದಲೂ ವಿವಾದ ಇತ್ತು ಎನ್ನಲಾಗುತ್ತಿದೆ. 3&4 ದಿನಗಳ ಹಿಂದೆ ಕೆಲವು ಮಧ್ಯಸ್ಥಿಕೆದಾರರು ಎರಡೂ ಕುಟುಂಬದ ನಡುವೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಸೋಮವಾರ ಸಂಜೆ ಏಕಾಏಕಿ ಈ ಟನೆ ನಡೆದಿರುವುದು ಸಂಧಾನ ನಡೆಸಲು ಹೋಗಿದ್ದವರೂ ಬೆಚ್ಚಿ ಬೀಳುವಂತೆ ಮಾಡಿದೆ.

ಮುದ್ದೇಬಿಹಾಳ ತಾಲೂಕಿನ ವೀರೇಶನಗರ ಗ್ರಾಮವ್ಯಾಪ್ತಿಯ ಜಮೀನಿನಲ್ಲಿ ಅಮರಪ್ಪ ಕೋರಿ ಸಣ್ಣಹನುಮಂತ ಲೊಟಗೇರಿ ಮೇಲೆ ಕುಳಿತು ಕುತ್ತಿಗೆ ಹಿಚುಕಿ ಕಲ್ಲಿನಿಂದ ಹೊಡೆಯುತ್ತಿರುವ ದೃಶ್ಯ.

ವಿಡಿಯೋದಲ್ಲಿ ದಾಖಲಾಗಿರುವ ದೃಶ್ಯ: ಅಮರಪ್ಪ ಕೋರಿ ವಯೋವೃದ್ಧ ಸಣ್ಣಹನುಮಂತ ಲೊಟಗೇರಿಯನ್ನು ನೆಲಕ್ಕೆ ಕೆಡವಿ, ಆತನ ಎದೆಯ ಮೇಲೆ ಕುಳಿತು ಕುತ್ತಿಗೆ ಹಿಚುಕುತ್ತಿರುವುದು, ಕಲ್ಲಿನಿಂದ ಮುಖ, ತಲೆಗೆ ಹೊಡೆಯುತ್ತಿರುವುದು ಹಾಗೂ ಈರಪ್ಪ ಕೋರಿ ದೇವಮ್ಮ ಲೊಟಗೇರಿಯ ತಲೆಗೂದಲು ಹಿಡಿದು ಜಮೀನಿನಲ್ಲಿ ಎಳೆದಾಡಿ, ಆಕೆಯನ್ನು ನೆಲಕ್ಕೆ ಕೆಡವಿ, ಬೆನ್ನ ಮೇಲೆ ಕಾಲಿನಿಂದ ಜೋರಾಗಿ ಒದೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

ದೇವಮ್ಮಳ ಮೊಮ್ಮಗ ಶರಣಬಸಪ್ಪ ಈ ಟನೆಯ ದೃಶ್ಯಗಳನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ತನ್ನ ಅಜ್ಜ ಸಣ್ಣಹನುಮಂತನ ತಲೆ, ಮುಖದಿಂದ ರಕ್ತ ಬರುತ್ತಿದೆ ಎಂದು ಚೀರುತ್ತಿರುವುದು, ದೇವಮ್ಮಳು ಹೊಡಿ ಎಷ್ಟು ಹೊಡಿತಿ ಹೊಡಿ ಎಂದು ಚೀರಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಎಂಬಿಎಲ್​&30&1ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net