ಬೆಂಕಿ ನಂದಿಸುವ ಕಲ್ಪಿತ ಪ್ರದರ್ಶನ

A fictional show of firefighting
ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಮುಧೋಳ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವ ಕಲ್ಪಿತ ಪ್ರದರ್ಶನ ನಡೆಸಿದರು.
Published on

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಶನಿವಾರ ಮುಧೋಳ ಅಗ್ನಿಶಾಮಕ ಠಾಣೆ ಸಹಯೋಗದಲ್ಲಿ ಬೆಂಕಿ ನಂದಿಸುವ ಕಲ್ಪಿತ ಪ್ರದರ್ಶನ ನಡೆಯಿತು.

ಅಗ್ನಿಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ವಿಠ್ಠಲ ಪಾಟೀಲ ಹಾಗೂ ಸಿಬ್ಬಂದಿ ಸುಭಾಷ್ ಗಡದನ್ನವರ, ಶಿವಾನಂದ, ಚಂದ್ರಶೇಖರ ರಾಠೋಡ, ರಾಚಪ್ಪ ಸಿದ್ದನ್ನವರ, ಕಷ್ಣ ಜಾಲಿಬೇರಿ ಅವರು ಕಲ್ಪಿತ ಪ್ರದರ್ಶನ ನಡೆಸಿಕೊಟ್ಟರು.

ಬೆಂಕಿಯಿಂದ ಉಂಟಾಗುವ ಅನಾಹುತ ತಡೆಯುವುದು, ನೆರೆಹಾವಳಿ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ವಿಧಾನ, ಭೂಕಂಪವಾದಾಗ, ಕಟ್ಟಡದಲ್ಲಿ ವಿದ್ಯುತ್ ಅವಘಡ ಸಂಭವಿಸಿದಾಗ ಜೀವ ರಕ್ಷಿಸಿಕೊಳ್ಳುವ ಬಗೆಯನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಶಾಲೆ ಪ್ರಾಂಶುಪಾಲ ಲೂಯಿಸ್ ಬರೆಟೋ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net