ಕೆಲ್ಲೆಂಗೆರೆಯಲ್ಲಿ ವಿಜೃಂಭಣೆಯ ಇಷ್ಟಲಿಂಗ ಪೂಜಾ ಕಾರ್ಯಕ್ರಮ

05arsph2ep (1)
Published on

ಅರಸೀಕೆರೆ: ತಾಲೂಕಿನ ಕೆಲ್ಲೆಂಗೆರೆ ಗ್ರಾಮದಲ್ಲಿ ಭಾನುವಾರ ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಮುಂಜಾನೆಯೇ ಗ್ರಾಮಕ್ಕೆ ಆಗಮಿಸಿದ ಪೀಠಾಭಿಮಾನಿಗಳು, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಬಳಿಕ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶಿರ್ವಚನ ನೀಡಿದ ಶ್ರೀಗಳು, ಮಾನವ ಕಲ್ಯಾಣವೇ ಜಗತ್ತಿನ ಸಕಲ ಧರ್ಮಗಳ ಸಾರವಾಗಿದ್ದು, ಶರಣರು, ಸಂತರು, ದಾಸರು ಇದಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಇದನ್ನು ಅರಿತು ಮನುಷ್ಯನ ಸ್ವಾರ್ಥ, ದುರಾಸೆಯಂತಹ ಕೆಟ್ಟ ಆಲೋಚನಾ ಪ್ರವೃತ್ತಿಯಿಂದ ಹೊರಬಂದು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ನಾಡಿಗೆ ಆದರ್ಶ ಪ್ರಜೆಯಾಗಿ, ಊರಿಗೆ ಉತ್ತಮ ವ್ಯಕ್ತಿಯಾಗಿ ಬದುಕಿದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬ ಸಂಗತಿಯನ್ನು ಎಲ್ಲರೂ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಶನಿವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಗೌರವಗಳೊಂದಿಗೆ ಬರ ಮಾಡಿಕೊಳ್ಳಲಾಯಿತು. ಉದ್ಯಮಿ ಕೆ.ವಿ.ನಿರ್ವಾಣಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯತೀಶ್, ಮುಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು. ಸಮಾರಂಭದ ಹಿನ್ನಲೆಯಲ್ಲಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net