ಸಂಭ್ರಮದ ಶಾಲಾ ಪ್ರಾರಂಭೋತ್ಸವ

A festive school opening ceremony
ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಮುಖ್ಯಶಿಕ್ಷಕಿ ಎಸ್.ಬಿ. ಇಟಿ, ಶಿಕ್ಷಕರಾದ ಸಿ.ಎಸ್. ಚಟ್ಟೇರ, ಬಿ.ಎಸ್. ಕುಂಬಾರ, ಎಸ್.ಎಂ. ದೇವರಡ್ಡಿ, ಎಸ್.ವಿ. ಕಂಠಿ, ಜಿ.ಆರ್. ಗಿರಿಜಾ, ಎಸ್.ಎಸ್. ಕಟ್ಟಿಮನಿ ಇತರರಿದ್ದರು.
Published on

ಕೂಡಲಸಂಗಮ: ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು.
ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ತರಗತಿಗಳಿಗೆ ಹಾಜರಾದರು. ತಳಿರು, ತೋರಣಗಳಿಂದ ಶಾಲೆ ಶೃಂಗರಿಸಲಾಗಿತ್ತು.

ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಯೂಟ ಸವಿದರು. ದಾಖಲಾತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಖ್ಯಶಿಕ್ಷಕಿ ಎಸ್.ಬಿ. ಇಟಿ, ಶಿಕ್ಷಕರಾದ ಸಿ.ಎಸ್. ಚಟ್ಟೇರ, ಬಿ.ಎಸ್. ಕುಂಬಾರ, ಎಸ್.ಎಂ. ದೇವರಡ್ಡಿ, ಎಸ್.ವಿ. ಕಂಠಿ, ಜಿ.ಆರ್. ಗಿರಿಜಾ, ಎಸ್.ಎಸ್. ಕಟ್ಟಿಮನಿ, ಡಿ.ಬಿ. ನದಾಫ್, ಎಸ್.ಜಿ. ಗೌಡರ, ಎಚ್.ಬಿ. ಪುರದ, ಎಸ್.ಎಲ್. ಪಾಟೀಲ, ಎಚ್.ಡಿ. ಬಡಿಗೇರ, ಆರ್.ಎ. ತಂಬಾಕದ ಇದ್ದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಕೂಡಲಸಂಗಮ ಅರ್ಚಕ ಕಾಲನಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಿರೇಶ ಕೋಟೂರ, ಮುಖಂಡರಾದ ಅಮರಯ್ಯ ಕೋಟೂರ, ಎಸ್.ಎಂ. ಪುರಾಣಿಕ, ಸಿದ್ದಯ್ಯ ಹೊಲ್ದೂರಮಠ, ಪ್ರಭು ಕೋಟೂರ, ಶೇಖರಯ್ಯ ಸ್ಥಾವರಮಠ, ವಿದ್ಯಾಶ್ರೀ ಹಿರೇಮಠ, ಮುಖ್ಯಶಿಕ್ಷಕ ಕೆ.ಆರ್. ದೇಶಪಾಂಡೆ, ಶಿಕ್ಷಕಿ ಜಯಶ್ರೀ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net