ಸಂಭ್ರಮದ ಹೊರಬೀಡು ಉತ್ಸವ

6 anr 7
ದೊಡ್ಡ ಆಲದ ಮರದ ಕೆಳಗೆ ಅಡುಗೆ ಮಾಡಿ ದೇವರಿಗೆ ನೈವೇದ್ಯ ತೋರಿಸುತ್ತಿರುವ ಚಿಕ್ಕದಾನವಂದಿ ಗ್ರಾಮಸ್ಥರು.
Published on

ಆಯನೂರು: ಚಿಕ್ಕದಾನವಂದಿ ಗ್ರಾಮದಲ್ಲಿ ಮಂಗಳವಾರ ಹೊರಬೀಡು ಉತ್ಸವ ವಿಜೃಂಭಣೆಯಿAದ ಆಚರಿಸಲಾಯಿತು. ಒಟ್ಟು 120 ಕುಟುಂಬಗಳಿರುವ ಸುಮಾರು 600 ಜನಸಂಖ್ಯೆ ಇರುವ ಒಂದು ಸಣ್ಣ ಹಳ್ಳಿ ಚಿಕ್ಕದಾನವಂದಿ ಗ್ರಾಮ. ಶಿವಾಜಿ ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಪೂಜಾರಿ, ಲಿಂಗಾಯತ, ಆಚಾರಿ, ತಿಗಳರು ಹಾಗೂ ಅಗಸರು ಹೀಗೆ ವಿವಿಧ ಜನಾಂಗದವರು ಈ ಹಬ್ಬದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವುದು ವಿಶೇಷ.
ಬೆಳಗ್ಗೆ 4 ಗಂಟೆಗೆ ಜಾನುವಾರು ಸಹಿತ ಕುರಿ, ಕೋಳಿ, ಬೆಕ್ಕು, ವೃದ್ಧರು, ಗರ್ಭಿಣಿ, ಬಾಣಂತಿಯರು, ಹಸುಗೂಸು ಸಹಿತ ಇಡೀ ಗ್ರಾಮದ ಜನರೇ ಊರು ತೊರೆಯುತ್ತಾರೆ. ಗ್ರಾಮ ದೇವತೆಗಳಾದ ಬಸವೇಶ್ವರ ಹಾಗೂ ಹೊರಕಟ್ಟೆ ದುರ್ಗಮ್ಮ ದೇವರ ಪಲ್ಲಕ್ಕಿ ಹೊತ್ತು ಊರ ಹೊರಗಿರುವ ಸುಮಾರು ಅರ್ಧ ಎಕರೆಯಷ್ಟಿರುವ ದೊಡ್ಡ ಆಲದ ಮರದ ಕೆಳಗೆ ಬಂದು ಸೇರುತ್ತಾರೆ. ಅಲ್ಲಿ ಕಳಸ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಾರೆ. ಗ್ರಾಮದ ಪ್ರತಿ ಕುಟುಂಬವು ಆಲದ ಮರದ ಕೆಳಗೆ ಟೆಂಟ್ ಹಾಕಿಕೊಂಡು ಒಂದು ದಿನ ಕಾಲ ಕಳೆಯುತ್ತಾರೆ. ಮಧ್ಯಾಹ್ನ ಹೋಳಿಗೆ, ಪಾಯಸ ವಿವಿಧ ಖಾದ್ಯಗಳನ್ನು ತಯಾರಿಸಿ ಸಂಬAಽಕರ ಜತೆ ಊಟ ಸವಿಯುತ್ತಾರೆ.
ದೇವರಿಗೆ ಹಾಗೂ ಕಳಸಕ್ಕೆ ಮಧ್ಯಾಹ್ನ ೧೨ರಿಂದ ಸಂಜೆ ೪ ವರೆಗೂ ಪೂಜೆ ನಡೆಯುತ್ತವೆ. ಭಜನೆ, ಕೋಲಾಟ ನಡೆಯುತ್ತವೆ. ಸಂಜೆ ಕಳಸವನ್ನು ಗಡಿಯಾಚೆಯೇ ಬಿಟ್ಟು, ಮೆರವಣಿಗೆಯಲ್ಲಿ ದೇವರ ಪಲ್ಲಕ್ಕಿಯನ್ನು ರಾತ್ರಿ ಊರಿನೊಳಗೆ ಪ್ರವೇಶ ಮಾಡುತ್ತದೆ. ಅಲ್ಲಿಗೆ ಹೊರಬೀಡು ಉತ್ಸವ ಮುಗಿಯುತ್ತದೆ.
ಗ್ರಾಮದೊಳಗೆ ಯಾರೂ ಪ್ರವೇಶಿಸದಂತೆ ಸುತ್ತಲೂ ಬೇಲಿ ಹಾಕಲಾಗುತ್ತದೆ. 9 ವರ್ಷಗಳ ನಂತರ ಪುನಃ ಗ್ರಾಮದಲ್ಲಿ ಉತ್ಸವ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ, ಯಾವುದೇ ಕಷ್ಟ ತೊಂದರೆಗಳು ಬಾರದಂತೆ ಗ್ರಾಮ ದೇವರು ರಕ್ಷಿಸುತ್ತಾರೆ ಎಂಬ ನಂಬಿಕೆ ಇದೆ.

ಬೆಳಗಿನ ಜಾವ ಪಲ್ಲಕ್ಕಿ ಹೊರಡಿಸಿ ಅಕ್ಷಯ ಬಾಗಿಲು ಮುಚ್ಚಲಾಗುವುದು. ಊರ ಹೊರಗೆ ಬಂದರೆ ರಾತ್ರಿಯೇ ಗ್ರಾಮದೊಳಗೆ ಪ್ರವೇಶ. ಗ್ರಾಮಸ್ಥರು, ನೆಂಟರಿಷ್ಟರು ಒಂದೇ ಕಡೆ ಸೇರಿಕೊಂಡು ಅಡುಗೆ ಮಾಡಿ ಊಟ ಮಾಡುವುದೇ ಆನಂದದ ವಿಷಯ. ಹೀಗೆ ಎಲ್ಲರನ್ನು ಬೆಸೆಯುವಂತೆ ಮಾಡುವುದೇ ಹಬ್ಬದ ವಿಶೇಷ.| ಉಮೇಶ, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net