ಸಂಭ್ರಮದ ಹನುಮ ಜಯಂತ್ಯುತ್ಸವ

H-12 RAIL NAGAR HANUMA
Published on

ಹುಬ್ಬಳ್ಳಿ: ನಗರದ ವಿವಿಧೆಡೆಯ ಮಾರುತಿ ಮಂದಿರದಲ್ಲಿ ಹನುಮ ಜಯಂತ್ಯುತ್ಸವವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಮರಾಠ ಗಲ್ಲಿ, ಲಿಂಗರಾಜ ನಗರ, ಹೊಸೂರ, ಉಣಕಲ್, ಭೈರಿದೇವರಕೊಪ್ಪ, ರೇಲ್ ನಗರ ಸೇರಿ ಇತರೆಡೆ ಇರುವ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ಆರತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೇರವೇರಿಸಿ, ಮಾರುತಿ ದೇವರಿಗೆ ನೈವೇದ್ಯ ಸಮರ್ಪಿಸಲಾಯಿತು.

ನಂತರ ಭಕ್ತರು ಮಾರುತಿ ದೇವರ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಜೋಗುಳ ಹಾಡಿದರು. ವಿವಿಧ ಭಜನಾ ಮಂಡಳದವರು ಭಜನೆ ಮಾಡಿದರು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ನ್ಯೂ ಕಾಟನ್ ಮಾರ್ಕೆಟ್: ನಗರದ ನ್ಯೂ ಕಾಟರ್ನ್ ಮಾರ್ಕೆಟನ್‌ನ ಹನುಮಾನ್ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ತ ಅದ್ದೂರಿ ತೊಟ್ಟಿಲೋತ್ಸವ ಜರುಗಿತು. ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ ಬಾಫಣಾ, ಎಸಿಪಿ ವೀರೇಶ, ಪ್ರಮುಖರಾದ ಪ್ರಕಾಶ ಜಿಗಳೂರ, ಹೇಮಂತ ಮೋದಿ, ಪ್ರಕಾಶ ಬೆಟಗೇರಿ, ಮಂಜುನಾಥ ಮುನವಳ್ಳಿ, ಸೋಮನಾಥ ಜೋಳದ, ಜೀವೋತ್ತಮ ಶಾನಭಾಗ, ಸಂತೋಷ ಮುತಗಿ ಇತರರು ಇದ್ದರು.

ಸತ್ತೂರು: ಸತ್ತೂರ ನಾರಾಯಣ ಪಾರಾಯಣ ಬಳಗದಿಂದ ಸಮೀಪದ ಉದಯಗಿರಿಯ ಡಿ.ಕೆ. ಜೋಶಿ ನಿವಾಸದಲ್ಲಿ ಹನುಮ ಜಯಂತಿ ನಿಮಿತ್ತ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು.

ಬಿಜಾಪುರ ಹನುಮಂತ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಸಂಜೀವ ಗೋಳಸಂಗಿ, ಡಾ. ಶ್ರೀನಾಥ, ಡಾ. ರವಿ ದುಮ್ಮವಾಡ, ವೆಂಕಟೇಶ ಕುಲಕರ್ಣಿ, ಹನುಮಂತ ಪುರಾಣಿಕ, ಅಣ್ಣಿಗೇರಿ ಪಟ್ಟಣಕೋಡಿ, ಕೇಶವ ಕುಲಕರ್ಣಿ, ಸಿರುಗುಪ್ಪಿ ಅಂಬೇಕರ, ಆನಂದ ದೇಶಪಾಂಡೆ, ಎಸ್.ಎಂ. ಜೋಶಿ ಲಕ್ಷ್ಮೇಶ್ವರ, ಬಹದ್ದೂರ ದೇಸಾಯಿ, ತಂಗೋಡ ದೇಸಾಯಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net