ಸಂಭ್ರಮದ ಗೌರಿ-ಗಣೇಶ ಹಬ್ಬ

19 RPT 1
ರಿಪ್ಪನ್‌ಪೇಟೆಯ ಹಿಂದು ರಾಷ್ಟ್ರಸೇನಾ ಗಣಪತಿ
Published on

ರಿಪ್ಪನ್‌ಪೇಟೆ: ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಗೌರಿ ಮತ್ತು ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾ ಸಮಿತಿಯಿಂದ ಗಣೇಶ ಮೂರ್ತಿ ಸೇರಿ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಗಣಪತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ವಿದ್ಯಾನಗರದಿಂದ ಗಣೇಶನ ವಿಗ್ರಹದ ಮೆರವಣಿಗೆಯೊಂದಿಗೆ ಶಿವಮೊಗ್ಗ ರಸ್ತೆಯಲ್ಲಿ ಆಗಮಿಸಿ, ವಿನಾಯಕ ವೃತ್ತದಲ್ಲಿ ಭಗವಾಧ್ವಜ ಆರೋಹಣ ಮಾಡಿ ನಂತರ ಹಿಂದು ರಾಷ್ಟ್ರಸೇನಾ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಷ್ಠಾಪನೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಮಿತಿಯಿಂದ ಮಹಿಳೆಯರು ಗೌರಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ, ವಿನಾಯಕನಗರದಲ್ಲಿ ಪ್ರತ್ಯೇಕ ಗಣೇಶನ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net