

ಬಸವನಬಾಗೇವಾಡಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ರೈತರು ಸಂಭ್ರಮದಿಂದ ಕಾರ ಹುಣ್ಣಿಮೆ ಎತ್ತುಗಳ ಕರಿಹರಿದರು.
ಬೆಳಗ್ಗೆ ಎತ್ತು, ಆಕಳು, ಕರುಗಳ ಮೈ ತೊಳೆದು ಅವುಗಳಿಗೆ ಗೆಜ್ಜೆಸರ, ಬಾಸಿಂಗು ಕಟ್ಟಿ, ಕೊಂಬುಗಳಿಗೆ ಬಣ್ಣ ಹಚ್ಚಿ ಶೃಂಗಾರಗೊಳಿಸಿದರು. ರೈತರ ಕೃಷಿ ಸಲಕರಣೆಗಳನ್ನು ಪೂಜಿಸಿದರು.
ಬಳಿಕ ರೈತರೆಲ್ಲರೂ ಸೇರಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಪ್ರಮು ಸ್ಥಳಗಳಲ್ಲಿ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದರು.
ಕರಿ ಹರಿಯುವ ಸ್ಪರ್ಧೆಯಲ್ಲಿ ಯಾವ ಬಣ್ಣದ ಎತ್ತು ಮುಂದೆ ಓಡುತ್ತದೆ ಆ ಬಣ್ಣದ ದವಸ ದಾನ್ಯಗಳು ಉತ್ತಮವಾಗಿ ಬರುತ್ತವೆ ಎಂಬುದು ರೈತರ ಲೆಕ್ಕಾಚಾರ.
ಪಟ್ಟಣದ ಗಣಪತಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ವಿಜಯಪುರ ರಸ್ತೆಯ ಬಸವ ಸ್ಮಾರಕದ ಬಳಿ ಕರಿ ಹರಿಯಲಾಯಿತು. ಅಪಾರ ಜನತೆ ಎತ್ತುಗಳ ಓಟವನ್ನು ನೋಡಿ ಸಂತಸ ಪಟ್ಟರು.