ಯಲ್ಲಟ್ಟಿ ಗ್ರಾಮದಲ್ಲಿ ಸಂಭ್ರಮದ ಹಾಲೋಕಳಿ

A festive atmosphere in Yallatti village
A festive atmosphere in Yallatti village
Published on

ರಬಕವಿ-ಬನಹಟ್ಟಿ : ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ಅಂಗವಾಗಿ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಸಂಭ್ರಮದ ಹಾಲೋಕಳಿ ಬುಧವಾರ ಸಂಜೆ ಜರುಗಿತು.

ಗ್ರಾಮದ ಹಿರಿಯರಾದ ವಸಂತ ಪಾಟೀಲ ಅವರು ಹಾಲಗಂಬದ ಪೂಜೆ ಮಾಡಿ ಹಾಲೋಕುಳಿಗೆ ಚಾಲನೆ ನೀಡಿದರು. ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಕಂಬ ಜಾರಲೆಂದು ಹಾಲು, ತುಪ್ಪ, ಬಾಳೆಹಣ್ಣಿನ ರಸ್ ಸೇರಿದಂತೆ ಇನ್ನೀತರ ಜಾರುವ ಪದಾರ್ಥಗಳನ್ನು ಏರಚುತ್ತಾರೆ. ಇವೆಲ್ಲವನ್ನು ದಿಕ್ಕರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು. ಗ್ರಾಮದಲ್ಲಿ ಯುವಕರು ಹಾಲಗಂಬ ಏರುತ್ತಿದ್ದಂತೆ ನೆರೆದ ಜನ ಅವರನ್ನು ಹುರದುಂಬಿಸಿ ಸಂಭ್ರಮಿಸಿದರು.

ಓಕಳಿ ಕಮಿಟಿಯ ರಾಚಯ್ಯ ಹಿರೇಮಠ, ಶಂಕರ ಮಗದುಮ್, ಶಿವಗೌಡ ಪಾಟೀಲ, ಸೋಮನಿಂಗ ನಾಯಿಕ, ಸಂಜು ಮಾಳಗೌಡ, ಚನ್ನಪ್ಪ ಮಗದುವ, ವಸಂತ ಪಾಟೀಲ, ಶಂಕರ ಸಂತಿ, ಸಿದ್ದಪ್ಪ ಮದರಖಂಡಿ, ಶಿವಪ್ಪ ಮಗದುಮ, ಬಸಪ್ಪ ಸೊಡ್ಡಗಿ, ಸತ್ಯಪ್ಪ ಮನಗೂಳಿ, ಬಸಪ್ಪ ಝಳಕಿ, ಲಕ್ಷ್ಮಣ ಮಾಳಗೌಡ, ಬಾಬು ಮುದಕನ್ನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net