ಐತಿಹಾಸಿಕ, ಪೌರಾಣಿಕವಾಗಿ ಮಹತ್ವದ ಹಬ್ಬ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ರಕ್ಷಾ ಬಂಧನ ಕೇವಲ ನೂಲಿನ ದಾರ ಅಷ್ಟೇ ಅಲ್ಲ, ಅದರಲ್ಲಿ ಭಾವನೆ ಅಡಗಿರುತ್ತದೆ. ರಕ್ಷಾ ಬಂಧನದ ಮಹತ್ವ ಏನು ಎಂಬುದನ್ನು ಕೃಷ್ಣ ದ್ರೌಪದಿಗೆ ರಕ್ಷೆ ಕಟ್ಟುವುದರ ಮೂಲಕ ಜಗತ್ತಿಗೆ ತೋರಿಸಿದ್ದಾನೆ. ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಸಹ ಈ ಹಬ್ಬ ಬಹಳ ಮಹತ್ವವನ್ನು ಪಡೆದಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಿ ದೇವಿ ಎಂ.ಆರ್. ಹೇಳಿದರು.

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯ ರೋವರ್ಸ್ ರೇಂಜರ್ ಘಟಕದ ವತಿಯಿಂದ ನಡೆದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೋವರ್ಸ್ ರೇಂಜರ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಮಂಜುನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ್ ಡಿ.ಪ್ರಭು, ರೇಂಜರ್ ಘಟಕದ ಸಂಚಾಲಕಿ ಗೀತಾಕುಮಾರಿ, ಕನ್ನಡ ಉಪನ್ಯಾಸಕ ಡಾ.ಉದಯ್‌ಕುಮಾರ್, ರೋವರ್ಸ್ ಘಟಕದ ಸಂಚಾಲಕ ಮಹೇಶ್ ಕೊಟ್ಟಾರಿ, ಹಳೇ ವಿದ್ಯಾರ್ಥಿ ಶ್ರೀಪ್ರದ, ವಿದ್ಯಾರ್ಥಿ ನಾಯಕ ಆಯುಷ್, ನಾಯಕಿ ತ್ರಿಶಾ, ರೇಂಜರ್ ನಾಯಕಿ ಪ್ರತೀಕ್ಷಾ ಉಪಸ್ಥಿತರಿದ್ದರು. ಸನ್ನಿಧಿ ಸ್ವಾಗತಿಸಿದರು. ವರ್ಷಿಣಿ ವಂದಿಸಿದರು. ಅದಿತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net