

ಗಜೇಂದ್ರಗಡ: ರೋಣ ವಿಧಾನಸಭಾ ಮತಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಜೇಂದ್ರಗಡ- ಉಣಚಗೇರಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜು. 16ರಂದು ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಸಮಾರಂಭ ಆಯೋಜಿಸಲಾಗಿದೆ’ ಎಂದರು.
ಮಲ್ಲಿಕಾರ್ಜುನ ಹಿರೇಕೊಪ್ಪ ಮಾತನಾಡಿ, ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಸಿದ್ದಪ್ಪ ಬಂಡಿ ಅಧ್ಯಕ್ಷತೆ ವಹಿಸುವರು. ಚಂಬಣ್ಣ ಚವಡಿ ಉದ್ಘಾಟಿಸುವರು ಎಂದರು.
ಪ್ರಭು ಚವಡಿ, ಮುತ್ತಣ್ಣ ಮ್ಯಾಗೇರಿ, ಚಂಬಣ್ಣ ಚವಡಿ, ಮಹೇಶ ಪಲ್ಲೇದ, ಶಶಿಧರ ವಕ್ಕಲರ, ಎಸ್.ಜಿ. ಕಾಶಪ್ಪನವರ, ಎಸ್.ಎಂ. ಅಗಸಿಬಾಗಿಲ, ಶರಣಪ್ಪ ದಿಂಡೂರ, ಕಳಕಪ್ಪ ಸಂಗನಾಳ, ಕಳಕಪ್ಪ ಅಬ್ಬಿಗೇರಿ, ಅನಿಲ ಸಂಗನಾಲ, ತುಳಸಪ್ಪ ಸುಳ್ಳದ, ಇತರರಿದ್ದರು.