

ಹುಬ್ಬಳ್ಳಿ: ಮಾತೋಶ್ರೀ ಹುಲಿಗೆಮ್ಮ ಪೋಸಾ ಅಮ್ಮನವರಿಗೆ ಏಷ್ಯಾ ಅಂತಾರಾಷ್ಟ್ರೀಯ ಕಲ್ಚರಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದರ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಅರವಿಂದ ನಗರದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸೋಮವಾರ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಹುಲಿಗೆಮ್ಮದೇವಿ ಭಕ್ತವೃಂದ, ಕನ್ನಡ ಸಾಹಿತ್ಯ ಪರಿಷತ್ ಗೋವಾ, ದಿವ್ಯಜ್ಞಾನಿ ಸಹದೇವಪ್ಪ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾತೋಶ್ರೀ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಖುಷಿಯ ವಿಚಾರ. ಆ ಪದವಿಗೇ ಗೌರವ ಬಂದಂತಾಗಿದೆ ಎಂದರು.
ಸಾಹಿತಿ ಅರವಿಂದ ಯಾಳಗಿ ಮಾತನಾಡಿ, ಹುಲಿಗೆಮ್ಮ ಅಮ್ಮನವರಲ್ಲಿ ಆಧ್ಯಾತ್ಮಿಕ ಅನುಭೂತಿಗಳು ಅಗಾಧ ಪ್ರಮಾಣದಲ್ಲಿದ್ದು ಅವು ಜನಸೇವೆಗೆ ಮುಡಿಪಾಗಿವೆ ಎಂದರು.
ಹೈಕೋರ್ಟ್ ನ್ಯಾಯವಾದಿ ಹೇಮಂತ ಕರ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಗೋವಾದ ಕಸಾಪ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ದಕ್ಷಿಣ ಗೋವಾ ಕಸಾಪ ಅಧ್ಯಕ್ಷ ಪರಶುರಾಮ ಕಲಿವಾಳ, ಪ್ರಮುಖರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಪ್ರಕಾಶ ಅರಗಂಜಿ, ನಾಗಾರ್ಜುನ ಕತ್ರಿಮಲ್, ವಿಠ್ಠಲ್ ಏಕಬೋಟೆ, ಸೂರ್ಯನಾರಾಯಣ ಕಣ್ಮಕಲ್, ಎಂ.ಜಿ. ಹೆಬ್ಬಳ್ಳಿ, ಶ್ರೀನಿವಾಸ ಶಾಲಗಾರ, ಸಂಜೀವ ಬುಗಡಿ, ಪರಶುರಾಮ ಸುಳ್ಳದ, ಗುರು ಬನ್ನಿಕೊಪ್ಪ, ವಿರೂಪಾಕ್ಷಿ ಛಲವಾದಿ, ಲಕ್ಷ್ಮಣ ವಡ್ಡರ, ಎಂ.ಎಫ್. ಹೆಬ್ಬಳ್ಳಿ, ಎ.ಎಫ್. ಹೆಬ್ಬಳ್ಳಿ, ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಇತರರು ಇದ್ದರು.