ಸೊಂಟದ ಭಾಗದಲ್ಲಿ ಕೀವು ತುಂಬಿದೆ... ನಟಿ ಚೇತನಾ ರಾಜ್ ಸಾವಿನ ಬೆನ್ನಲ್ಲೇ ಮತ್ತೊಂದು ಫ್ಯಾಟ್​ ಸರ್ಜರಿ ಪ್ರಕರಣ ಬೆಳಕಿಗೆ!

fat surgery
Published on

ಬೆಂಗಳೂರು: ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್ ದುರಂತ ಅಂತ್ಯ ಕಂಡ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ನಗರದಲ್ಲಿ ಬೆಳಕಿಗೆ ಬಂದಿದೆ.

ಫ್ಯಾಟ್ ಕರಗಿಸುವ ಸರ್ಜರಿಗೆ ಒಳಗಾದ ಮಹಿಳೆ, ಅಡ್ಡಪರಿಣಾಮಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಆಗಿರುವ ದೆಹಲಿ ಮೂಲದ ಬೆಂಗಳೂರು ನಿವಾಸಿ ತೊಂದರೆಗೆ ಸಿಲುಕಿದ್ದಾರೆ.

ಎಂ.ಎಸ್. ಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿರುವ ಮಹಿಳೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 10 ದಿನಕ್ಕೆ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಸೊಂಟದ ಭಾಗದಲ್ಲಿ ಕೀವು ತುಂಬಿ, ಕಪ್ಪಾಗಿ ಗಾಯಗಳಾಗಿವೆ. ಅತಿಯಾದ ನೋವಿನಿಂದ ಬಳಲುತ್ತಿರುವುದಾಗಿ ಮಹಿಳೆ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಆಸ್ಪತ್ರೆಯವರು ಯಾರು ಸ್ಪಂದಿಸಿಲ್ಲ.

ಈ ಬಗ್ಗೆ ಮತ್ತೊಬ್ಬ ವೈದ್ಯರ ಸಂಪರ್ಕ ಮಾಡಿದಾಗ ಸದ್ಯ ಕೀವು ತುಂಬಿಕೊಂಡಿರುವ ಮತ್ತೊಂದು ಸರ್ಜರಿಯ ಸಲಹೆ ನೀಡಿದ್ದಾರೆ. ಇದರಿಂದ ಮಹಿಳೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ವೈದ್ಯರ ವಿರುದ್ಧ ಮೆಡಿಕಲ್ ಕೌನ್ಸಿಲ್ ಆಫ್​ ಇಂಡಿಯಾಗೆ ದೂರು ನೀಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net