

ಲಕ್ಷ್ಮೇಶ್ವರ: ಶ್ರೀ ರಾಮ ಸೇನಾ ತಾಲೂಕು ಘಟಕದಿಂದ ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮ ಸೇನಾ ಕಾರ್ಯಕರ್ತರಿಂದ ಭಾನುವಾರ ಪಟ್ಟಣದಲ್ಲಿ ಬೃಹತ್ ಆಕರ್ಷಕ ಪಥಸಂಚಲನ ನಡೆಯಿತು.
ಶ್ರೀ ರಾಮಸೇನಾ ಸಂಘಟನೆ ಸ್ಥಾಪನೆಯಾಗಿ 20ವರ್ಷ, ಶ್ರೀರಾಮಸೇನಾ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರ 70ನೇ ವರ್ಷದ ಸಂಭ್ರಮ ನಿಮಿತ್ತ ನೂರಾರು ಕಾರ್ಯಕರ್ತರು ಗಣವೇಷದೊಂದಿಗೆ ಪಥಸಂಚಲನ ನಡೆಸಿದರು.
ಪಥಸಂಚಲನ ರಂಭಾಪುರಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡು ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಕಾಳಮ್ಮದೇವಿ ದೇವಾಸ್ಥಾನ, ಕೋರ್ಟ್ ಸರ್ಕಲ್, ಹಳ್ಳದಕೇರಿ, ತಹಸೀಲ್ದಾರ್ ಕಚೇರಿ, ಭರಮದೇವರ ಸರ್ಕಲ್, ಪಾದಗಟ್ಟಿ, ಸರ್ಕಾರಿ ಆಸ್ಪತ್ರೆ, ಹಳೇ ಬಸ್ ನಿಲ್ದಾಣ, ಕಿತ್ತೂರರಾಣಿ ಚನ್ನಮ್ಮ ವೃತ್ತ ಮುಖಾಂತರ ಸಾಗಿ ಪಿಎಸ್ಬಿಡಿ ಗರ್ಲ್ಸ್ ಹೈಸ್ಕೂಲ್/ತೋಟದ್ದೇವರಮಠದಲ್ಲಿ ಸಂಪನ್ನಗೊಂಡಿತು.