ಕೃಷಿಕನ ಜೇಬು ತುಂಬಿದ ಕೆಂಬಾಳೆ

Kembale
Published on

| ಕೃಷ್ಣ ಕುಲಕರ್ಣಿ ಕಮಲಾಪುರ (ಕಲಬುರಗಿ)

ಹೊರಗಿನ ಗೊಬ್ಬರ ಬಳಸಲ್ಲ. ವಿಷಕಾರಕ ರಾಸಾಯನಿಕ ಸಿಂಪಡಿಸಲ್ಲ. ಸಹಜ ಕೃಷಿಯಲ್ಲೇ ಸಂತೃಪ್ತ ಜೀವನ ನಡೆಸುತ್ತಿರುವ ರಾಜನಾಳ ಗ್ರಾಮದ ಸಾವಯವ ಕೃಷಿಕ ರೇವಣಸಿದ್ದಪ್ಪ ಕಮಲಾಪುರ ಅವರ ಸ್ಪಷ್ಟ ಮಾತಿದು. 4.26 ಎಕರೆ ಪೈಕಿ ಒಂದೂವರೆ ಎಕರೆಯಲ್ಲಿ 35 ವರ್ಷಗಳಿಂದ ಕೆಂಪು ಬಾಳೆಯನ್ನು ಯಂತ್ರಗಳಿಲ್ಲದೆ ಎತ್ತುಗಳಿಂದಲೇ ಉಳುಮೆ ಮಾಡುತ್ತಿದ್ದಾರೆ. ಒಂದೂವರೆ ಎಕರೆಯಲ್ಲಿ ಕೆಂಪು ಬಾಳೆ, ಇನ್ನುಳಿದ ಕಡೆ ಚೆಂಡು ಹೂ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಇವರಿಗೆ ಕೆಂಪು ಬಾಳೆಯೇ ಆದಾಯದ ಮೂಲ. ರಾಜ್ಯದ ಕಮಲಾಪುರ ಪ್ರದೇಶದಲ್ಲೇ ಕೆಂಬಾಳೆ ಬೆಳೆಯುತ್ತಿದ್ದರಿಂದ ಸಹಜವೇ ಬೇಡಿಕೆ ಹೆಚ್ಚಿದೆ.ಕೆಂಬಾಳೆ ಜತೆಗೆ 3000 ಸಸಿ ಚೆಂಡು ಹೂ, ತರಕಾರಿ ಜತೆಗೆ ಹೈನುಗಾರಿಕೆಗೂ ಆದ್ಯತೆ ನೀಡಿರುವ ಬಿರಾದಾರ, ಒಂದೂವರೆ ವರ್ಷ ಬಾಳೆಗೆ ಕಾಯದೆ ಚೆಂಡು ಮತ್ತು ತರಕಾರಿಯಿಂದ ನೆಮ್ಮದಿ ಜೀವನ ಕಂಡುಕೊಳ್ಳುತ್ತಿದ್ದಾರೆ ರೈತ ರೇವಣಸಿದ್ದಪ್ಪ ಬಿರಾದಾರ (ಸಂಪರ್ಕ ಸಂಖ್ಯೆ 97413- 39363)

ದಲ್ಲಾಳಿಗಳಿಂದ ದೂರವಾದ್ರು

ರೈತ ರೇವಣಸಿದ್ದಪ್ಪ 3 ದಶಕಗಳಿಂದ ಬೆಳೆದ ಕೆಂಪು ಬಾಳೆ ಯನ್ನು ದಲ್ಲಾಳಿಗಳಿಗೆ ನೀಡುತ್ತಿದ್ದರು. ಅವರು ಒಂದು ಗಿಡಕ್ಕೆ 350 ರೂ. ಅಂತೆ ಖರೀದಿಸುತ್ತಿದ್ದರು. ದಲ್ಲಾಳಿ ವ್ಯವಸ್ಥೆಯಿಂದ ಬೇಸತ್ತಿರುವ ಶರಣಬಸಪ್ಪ ಬಿರಾದಾರ, ಸ್ವತಃ ಮಾರುಕಟ್ಟೆ ವ್ಯವಸ್ಥೆಗೆ ಮುಂದಾದರು. ಫೇಸ್​ಬುಕ್, ವಾಟ್ಸ್​ಆಪ್​ಗಳಲ್ಲಿ ಮಾಹಿತಿ ಶೇರ್ ಮಾಡಿದರು. ರಸ್ತೆಯಲ್ಲಿ ನಿಂತು ಡಜನ್/ಕೆಜಿ ಯಂತೆ ಮಾರಾಟಕ್ಕೆ ಮುಂದಾದರು. ಈಗ -ಠಿ;1000 ಸಿಗ್ತಾ ಇದೆ.

ನಾಲ್ಕೂವರೆ ಎಕರೆಯಲ್ಲಿ ಕೆಂಪುಬಾಳೆ ಸೇರಿ ಮೆಣಸಿನಕಾಯಿ, ಬದನೆ, ಚೆಂಡು ಹೂ ಬೆಳೆಯುತ್ತಿ ದ್ದೇನೆ. ಡಜನ್ ಬಾಳೆಗೆ -ಠಿ;200 ಇದ್ದು, ಬೇಡಿಕೆ ಹೆಚ್ಚಿದೆ. ವಿವಿಧ ಭಾಗದ ರೈತರು ನಮ್ಮಿಂದ ಬಾಳೆ ಸಸಿ ಕೊಂಡೊಯ್ಯುತ್ತಿದ್ದಾರೆ. ಕೃಷಿಯಲ್ಲೇ ಸುಖಿ ಜೀವನ ನಡೆಸುತ್ತಿದ್ದೇವೆ. | ರೇವಣಸಿದ್ದಪ್ಪ ಬಿರಾದಾರ ಸಾವಯವ ರೈತ ರಾಜನಾಳ

ಅಪ್ಪಂದು ಕೃಷಿ ಕೆಲ್ಸ, ಮಗಂದು ಮಾರ್ಕೆಟಿಂಗ್

ರೇವಣಸಿದ್ದಪ್ಪ ಅಷ್ಟೇನೂ ಓದಿಲ್ಲ. ಅವರಾಯ್ತು, ಕೃಷಿಯಾಯ್ತು ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಸಿಕ್ಕಷ್ಟು ಲಾಭ ಸಿಗಲಿ ಎಂಬ ಉದ್ದೇಶದಿಂದ ಸ್ಥಳೀಯ ಬಾಗವಾನರಿಗೆ ಫಸಲು ನೀಡುತ್ತಿದ್ದರು. ಆದರೀಗ ಪುತ್ರ ಶರಣಬಸಪ್ಪ ಮಾರುಕಟ್ಟೆ ತಂತ್ರಗಾರಿಕೆಯಿಂದ ಭರ್ಜರಿ ಲಾಭ ಪಡೆದಿದ್ದಾರೆ. ಶರಣು ಅವರು ಕೇಂದ್ರೀಯ ವಿವಿಯಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net