ಏಕಾಂಗಿಯಾಗಿ ಧರಣಿ ನಡೆಸಿದ ರೈತ

30.. Pyp.02
ಪಿರಿಯಾಪಟ್ಟಣದ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಕೃಷಿಕ ಟಿ.ಸುಭಾಷ್.
Published on

ಪಿರಿಯಾಪಟ್ಟಣ: ನಮ್ಮ ಜಮೀನು ಪೋಡಿ ಮಾಡಿಕೊಡಲು ಒತ್ತಾಯಿಸಿದ್ದಕ್ಕೆ ಭೂಮಾಪನ ಇಲಾಖೆಯ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಅಂಗವಿಕಲ ರೈತ ಮಂಗಳವಾರ ಕಚೇರಿಯ ಬಾಗಿಲಲ್ಲೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿರುವ ಭೂ ಮಾಪನ ಇಲಾಖೆಯಲ್ಲಿ ಜಮೀನು ಸರ್ವೇ ಮಾಡಿಸಿ ಪೋಡಿ ಮಾಡಿಕೊಡಲು ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಟಿ.ಸುಭಾಷ್ 2023ರ ಆಗಸ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಇದುವರೆಗೂ ಜಮೀನು ಅಳತೆ ಮಾಡದ ಕಾರಣ ಕಚೇರಿಗೆ ಆಗಮಿಸಿ ಭೂಮಾಪನ ಇಲಾಖೆಯ ಮಾದಪ್ಪ ಅವರ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮುನಿಯಪ್ಪ ಅವರ ಬಳಿ ಈ ಬಗ್ಗೆ ದೂರು ನೀಡಿದಾಗ ಅವರೂ ನನ್ನನ್ನು ಬೈದಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಸಿಬ್ಬಂದಿ ಈ ಘಟನೆಯ ಬಗ್ಗೆ ಕ್ಷಮೆಯಾಚಿಸಿ, ಇನ್ನೊಂದು ವಾರದಲ್ಲಿ ಸರ್ವೇ ಮಾಡಿಸಿ ವರದಿ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net