ಸಾಲ ಬಾಧೆಯಿಂದ ನೇಣಿಗೆ ಶರಣಾದ ರೈತ

Farmer Sucide
Published on

ಸವಣೂರ: ಸಾಲ ಬಾಧೆಗೆ ರೈತರೊಬ್ಬರು ನೇಣಿಗೆ ಶರಣಾದ ಘಟನೆ ತಾಲೂಕಿನ ಚವಡಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಚವಡಾಳ ಗ್ರಾಮದ ನಿವಾಸಿ ಗದಿಗೆಪ್ಪ ಚನ್ನಬಸಪ್ಪ ಗೊಲ್ಲರ (43) ಆತ್ಮಹತ್ಯೆಗೆ ಶರಣಾದ ರೈತ. ಗದಿಗೆಪ್ಪ ಗೊಲ್ಲರ ಕೃಷಿ ಚಟುವಟಿಕೆಗಾಗಿ 2012ರಲ್ಲಿ ಕಾರಡಗಿ ಕೆವಿಜಿ ಬ್ಯಾಂಕ್‌ನಲ್ಲಿ 2.90 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಈ ಸಾಲ ಹೇಗೆ ತೀರಿಸುವುದು ಎನ್ನುವ ಚಿಂತೆಯಲ್ಲಿ ಆ. 29ರಂದು ಮಧ್ಯಾಹ್ನ 2 ಗಂಟೆಯಿಂದ ಸೆ. 1ರ ನಡುವಿನ ಅವಧಿಯಲ್ಲಿ ತಮ್ಮ ಚಿಕ್ಕಪ್ಪನ ಹೊಲದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net