ಸಾವಯವ ಕೃಷಿಯಲ್ಲೇ ಖುಷಿ ಕಂಡ ರೈತ

megilayogi
Published on

ಮುಳಬಾಗಿಲು: ಪ್ರಸ್ತುತ ಕಾಲಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ಹಲವು ಏರುಪೇರುಗಳಾಗುತ್ತಿದ್ದು, ನಷ್ಟ ಹೊಂದುತ್ತಿರುವವರ ಮಧ್ಯೆ ವಾರ್ಷಿಕವಾಗಿ ಕೃಷಿ ಜಮೀನನ್ನು ಬಾಡಿಗೆ ಪಡೆದು ಸಾವಯವ ಕೃಷಿಯ ಮೂಲಕ ಆರ್ಥಿಕ ಮೂಲ ಕಂಡುಕೊಂಡು ನೈಸರ್ಗಿಕ ಕೃಷಿಗೆ ಒತ್ತು ನೀಡಿದ್ದಾರೆ ತಾಲೂಕಿನ ರೈತ ಸಾಧಕ ತೊಂಡಹಳ್ಳಿಯ ಬಿ.ಪ್ರಭಾಕರ್​.

ಪಿತ್ರಾರ್ಜಿತವಾಗಿ 15 ಗುಂಟೆ ಜಮೀನು ಇದ್ದು, ಸಾವಯವ ಕೃಷಿ ಮಾಡಬೇಕೆಂಬ ತುಡಿತದಿಂದ ಸಾಧನೆಯ ಹಾದಿಗೆ ಕೊಂಡ್ಯೊಯ್ದಿದೆ.

ವಾರ್ಷಿಕ ಎಕರೆಗೆ 11 ಸಾವಿರದಂತೆ ಬಾಡಿಗೆಗೆ 3 ಎಕರೆ ಮಳೆ ಆಶ್ರಿತ ಜಮೀನು ಪಡೆದು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಸಂಪೂರ್ಣ ಒತ್ತು ನೀಡಿ, ದೇಶಿ ಬೀಜಗಳ ಮೂಲಕ ಕೃಷಿ ಆರಂಭಿಸಿ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ 20 ಕ್ವಿಂಟಾಲ್​ ನೆಲಗಡಲೆ ಬೆಳೆದಿದ್ದು, 10 ಕ್ವಿಂಟಾಲ್​ ಕಡಲೆಕಾಯಿ ಮಿಲ್​ಗೆ ಹಾಕಿದ್ದಾರೆ. ಮನೆಯಲ್ಲೇ ಗಾಣ ಮಾಡಿಕೊಂಡಿದ್ದು, 1 ಕೆಜಿಗೆ 500 ರೂ.ನಂತೆ ಬೆಂಗಳೂರಿನ ಮಾಲ್​ಗಳಿಗೆ, ಸಾವಯವ ಸಂತೆಗಳಿಗೆ ಮಾರಾಟ ಮಾಡಿ 1,17,500 ರೂ. ಗಳಿಸಿದ್ದು, 465 ಕೆಜಿ ಹಿಂಡಿ 3 ಸೀಮೆ ಹಸುಗಳಿಗೆ ಉಪಯೋಗಿಸಿಕೊಳ್ಳುವ ಮೂಲಕ ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಟ್ಟು 30 ಲೀಟರ್​ ಹಾಲು ಉತ್ಪಾದನೆ ಮಾಡುವ ಮೂಲಕ ಖಾಸಗಿ ಡೇರಿಗೆ ಲೀ.ಗೆ 32&34 ರೂ. ನಂತೆ ಮಾರಾಟ ಮಾಡುವ ಮೂಲಕ ನೆಲಗಡಲೆ ಮತ್ತು ಪಶುಪಾಲನೆಯಲ್ಲಿ ಎಲ್ಲ ಖರ್ಚು ಕಳೆದು ವಾರ್ಷಿಕ ಕನಿಷ್ಠ 1.5 ರಿಂದ 2 ಲಕ್ಕೂ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ನೆಲಗಡಲೆ ಕ್ವಿಂಟಾಲ್​ಗೆ 7 ಸಾವಿರ ರೂ.ನಂತೆ ಮಾರಾಟ ಮಾಡಿದ್ದು, 20 ಕ್ವಿಂಟಾಲ್​ಗೆ 1.40 ರೂ ಲಾಭ ಪಡೆಯಬಹುದು ಎನ್ನುತ್ತಾರೆ ರೈತ ಪ್ರಭಾಕರ್​.

ನೆಲಗಡಲೆ ಜತೆಯಲ್ಲಿ 15 ವಿವಿಧ ದೇಶಿ ಸ್ಥಳಿಯ ಮಿಶ್ರ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆ ಹೆಚ್ಚಿಸುವುದರ ಜತೆಗೆ, ನೆಲಗಡಲೆ ಮುಗಿದ ತಣ ಈ ಬೆಳೆಗಳು ಕೃಷಿಕನ ಕೈ ಬಲಪಡಿಸುತ್ತದೆ. ಹೆಸರು, ಉದ್ದು, ಸಾಸಿವೆ, ಎಳ್ಳು, ಹುಚ್ಚೆಳ್ಳು, ಸಾಮೆ, ಅವರೆ, ಅಲಸಂದೆ, ತೊಗರಿ, ಮೂಲಂಗಿ ಇತ್ಯಾದಿ ಮಿಶ್ರ ಬೆಳೆಗಳು ಮುಂಗಾರು ಮತ್ತು ಹಿಂಗಾರು ಮಳೆ ಆಶ್ರಿತ ಬೆಳೆಗಳು ಕೃಷಿಯನ್ನು ಖುಷಿಯಾಗಿಸಿದೆ.

ಇನ್ನೂ ಒಂದು ಎಕರೆಯಲ್ಲಿ 6 ಕ್ಟಿಂಟಾಲ್​ ರಾಗಿ, ಜತೆಗೆ 9 ವಿವಿಧ ಕಿರು ಸಿರಿಧಾನ್ಯ ಬೆಳೆಯುವ ಮೂಲಕ ಲಾಭ ಕಂಡುಕೊಂಡಿದ್ದಾರೆ. ಗುಂಗುರ (ಪುನಿ) ಸೊಪ್ಪುನಿಂದ 11 ಸಾವಿರ ರೂ., ಸಂಗ್ರಹಣೆ ಮಾಡಿದ್ದಾರೆ. ಇನ್ನೂ ಅವರೆ, ತೊಗರಿ ಮಳೆಯಿಂದ ಹೂವು ಉದುರಿದ್ದು, ಮುಂದೆ ಫಸಲು ಬರುವ ನಿರೀೆ ಇದೆ ಎಂದು ರೈತ ತಿಳಿಸಿದ್ದಾರೆ.

70 ಸಾವಿರ ಖರ್ಚು

ಶೇಂಗಾ ಬಿತ್ತನೆ ಮಾಡಲು ಟ್ರಾ$್ಯಕ್ಟರ್​ ಉಳುಮೆಗೆ 2 ಸಾವಿರ ರೂ, ಗುತ್ತಿಗೆ ಗೊಬ್ಬರ ಹಾಕಲು 500 ರೂ, ಸಲು ಬಂದಾಗ ಗಿಡ ಕೀಳಲು 10 ಜನ, ಕಾಯಿ ಬಿಡಿಸಲು 70 ಜನ ಒಟ್ಟು 80 ಜನ ಕೂಲಿಗೆ 36 ಸಾವಿರ ರೂ, ಸಿಪ್ಪೆ ಬಿಡಿಸಲು 14 ಸಾವಿರ ಒಟ್ಟಾರೆ 60&70 ಸಾವಿರ ಖರ್ಚು ಬರುತ್ತಿದೆ.

"ಸಾವಯವ ಕೃಷಿಯಿಂದ ಖುಷಿಯಾಗಿದೆ, ಶೇ.100 ಸಾವಯುವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆ ಕೊಂಡುಕೊಳ್ಳುವುದು ಒಂದು ಜಾಣ್ಮೆ, ಇಂಥಹ ಕೃಷಿಯಿಂದ ನಷ್ಟ ಉಂಟಾಗುವುದಿಲ್ಲ. ಮನೆಗೆ ಉತಷ್ಟ ವಿಷಮುಕ್ತ ಆಹಾರ, ಸಮಾಜಕ್ಕೂ ಅನುಕೂಲವಾಗುತ್ತದೆ."

- ತೊಂಡಹಳ್ಳಿ ಅರಿವು ಬಿ. ಪ್ರಭಾಕರ್​, ಸಾವಯುವ ಕೃಷಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net