ಸಮಗ್ರ ಬೇಸಾಯದಿಂದ ಗಮನಸೆಳೆದ ರೈತ

ಸಮಗ್ರ ಬೇಸಾಯದಿಂದ ಗಮನಸೆಳೆದ ರೈತ
Published on

ಎಂ.ಪಿ.ವೆಂಕಟೇಶ್ ಮದ್ದೂರು

ತಾಲೂಕಿನ ಕೊಪ್ಪ ಹೋಬಳಿಯ ಗುಡಿದೊಡ್ಡಿ ಗ್ರಾಮದಲ್ಲಿ ರೈತನೊಬ್ಬ ಸಮಗ್ರ ಬೇಸಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ದಿ.ನಿಂಗೇಗೌಡರ ಪುತ್ರ ಶಿವಲಿಂಗಯ್ಯ ಸಮಗ್ರ ಕೃಷಿಯಲ್ಲಿ ಯಶಕಂಡ ರೈತರಾಗಿದ್ದಾರೆ. ತಮಗಿರುವ 9 ಎಕರೆ ಭೂಮಿಯಲ್ಲಿ ವಾರ್ಷಿಕವಾಗಿ ಸುಮಾರು 4 ರಿಂದ 6ಲಕ್ಷ ರೂಪಾಯಿಗಳನ್ನು ಸಂಪಾದಿಸುವ ಮೂಲಕ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ.

1 ಎಕರೆ ಪ್ರದೇಶದಲ್ಲಿ 20 ಅಡಿ ಅಂತರದಲ್ಲಿ ಮಾವಿನ ಸಸಿಗಳನ್ನು ಬೆಳೆಯುತ್ತಿದ್ದಾರೆ. 10 ಅಡಿ ಅಂತರದಲ್ಲಿ ಸೀಬೆಯನ್ನು ಬೆಳೆದಿದ್ದಾರೆ, 1 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಸೀಡ್ಲೆಸ್, ಗಜನಿಂಬೆ ಹಾಗೂ ನಾಟಿನಿಂಬೆಗಳನ್ನು ಬೆಳೆದಿದ್ದಾರೆ ಇದರ ಜತೆಗೆ ಒಂದೂವರೆ ಎಕರೆ ಪ್ರದೇಶದಲ್ಲಿ 600 ಅಡಕೆ, 350 ತೆಂಗು, 1 ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್, 80 ಬಟರ್ ಫ್ರೂಟ್, 20 ಮೋಸಂಬಿ, 10 ವಾಟರ್ ಆಪಲ್, 10 ಸ್ಟಾರ್ ಫ್ರೂಟ್, ನೈಟ್ರೋಜ್ ಉತ್ಪಾದನೆಗಾಗಿ 10 ಅಡಿ ಎತ್ತರದಲ್ಲಿ 100 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ ಜತೆಗೆ 100 ಏಲಕ್ಕಿ ಬಾಳೆ, ಪಲಾವ್ ಎಲೆ, ಏಲಕ್ಕಿ ಸೇರಿದಂತೆ ಇನ್ನಿರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಜತೆಗೆ 15 ಮೇಕೆಗಳು, 4 ಹಸುಗಳು, 20 ನಾಟಿ ಕೋಳಿ ಸಾಕುವ ಮೂಲಕ ಕೈತುಂಬಾ ಆದಾಯಗಳಿಸುತ್ತಿದ್ದಾರೆ.

ಇವರ ಬೇಸಾಯಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, 3 ಬೋರ್‌ವೆಲ್‌ಗಳನ್ನು ಕೊರೆಸಿದ್ದು, ಇದರಿಂದ ಬರುವ ನೀರನ್ನು ಸರ್ಮಪವಾಗಿ ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇವರು ಬೆಳೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಬಳಸದೆ ಜಮೀನುಗಳಿಗೆ ಮೊದಲು ಕೊಟ್ಟಿಗೆ ಗೊಬ್ಬರವನ್ನು ಹಾಕಿ ನಂತರ ಚಗರೆಯನ್ನು ಹಾಕುತ್ತಾರೆ ಇದು ಚೆನ್ನಾಗಿ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ ಇದರಿಂದ ಮಣ್ಣಿನ ಫಲವತ್ತತೆ ಜತೆಗೆ ಉತ್ತಮ ಫಸಲು ಬರಲು ಕಾರಣವಾಗಿದೆ.

ಶಿವಲಿಂಗಯ್ಯ ಅವರ ಕೃಷಿ ಪ್ರೀತಿಗೆ ಪತ್ನಿ ಪ್ರೇಮಾ, ಅಣ್ಣನ ಪುತ್ರ ಹರೀಶ್ ಸೇರಿದಂತೆ ಇಡೀ ಕುಟುಂಬವೇ ಸಾಥ್ ನೀಡುತ್ತಿದೆ.

ಶಿವಲಿಂಗಯ್ಯನವರು ಸುಮಾರು ಐದು ವರ್ಷಗಳಿಂದ ಜಿಲ್ಲಾ ರೇಷ್ಮೆ ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷರಾಗಿ ರೇಷ್ಮೆ ಬೆಳೆಗಾರರ ಪರವಾಗಿ ನಿರಂತರ ಹೋರಾಟವನ್ನು ಮಾಡುವ ಮೂಲಕ ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನ ಪರಿಹರಿಸಲು ಶ್ರಮಿಸುತ್ತಿದ್ದಾರೆ.

ನೈಟ್ರೋಜನ್‌ಗೆ ಅಗಚಿಕೆ ಗಿಡ, ಭೂಮಿ ಉಳಿಮೆ ಮಾಡುವುದಿಲ್ಲ. ವಿಎಸ್‌ಟಿ ಸ್ಟಬ್ರರ್ ಮೂಲಕ ಹುಲ್ಲು, ಕಳೆಗಳನ್ನು ಕಟ್ ಮಾಡೋದು ವಿಶೇಷವಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರರನ್ನು ಅವಲಂಬಿಸಿಕೊಳ್ಳದೆ ಯಂತ್ರದ ಮೂಲಕ ಇವರೇ ಕೃಷಿ ಕಾರ್ಯಗಳನ್ನು ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net