ಮಳೆ ಅಭಾವ ಬೆಳೆ ನಾಶಪಡಿಸಿದ ನೇಶ್ವಿ ಗ್ರಾಮದ ರೈತ

16 rtl 02crop loss
Published on

ರಟ್ಟಿಹಳ್ಳಿ: ಕಳೆದ 15 ದಿನದಿಂದ ಮಳೆ ಬಾರದ ಪರಿಣಾಮ ರೈತರು ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.
ತಾಲೂಕಿನ ನೇಶ್ವಿ ಗ್ರಾಮದ ರೈತ ಕುಮಾರ ಚನ್ನಬಸನಗೌಡ ಹುಡೇದ ತಮ್ಮ 1.5 ಎಕರೆಯ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ನೀರಿನ ಅಭಾವದಿಂದ ನಾಶಪಡಿಸಿದ್ದಾರೆ.


ಮಳೆ ಕೊರತೆಯಿಂದಾಗಿ ಮೆಕ್ಕೆಜೋಳದ ಬೆಳೆ ಹಳದಿ ಮತ್ತು ನೇರಳೆ ಬಣ್ಣಕೆ ತಿರುಗಿ ಬೆಳೆಯು ಬೆಳವಣಿಗೆ ಕಾಣದಾಗಿತ್ತು. ಹೀಗಾಗಿ ಬೆಳೆ ನಾಶಪಡಿಸಿದ್ದಾಗಿ ತಿಳಿಸಿದ್ದಾರೆ.

ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬೆಳೆಯು ಹಳದಿ ಮತ್ತು ನೇರಳೆ ಬಣಕ್ಕೆ ತಿರುಗಿದೆ. ರೈತರು 19-19-19 ರಾಸಾಯನಿಕ ಗೊಬ್ಬರಕ್ಕೆ 1 ಲೀಟರ್ ನೀರಿಗೆ 5 ಗ್ರಾಂ. ಗೊಬ್ಬರವನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಇದರಿಂದ ಬೆಳೆಗೆ ಪೋಷಕಾಂಶ ದೊರೆಯುತ್ತದೆ. - ನಾಗರಾಜ ಕಾತರಕಿ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ರಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net