

ಅಕ್ಕಿಆಲೂರ: ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಸಮೀಪದ ಮಲಗುಂದ ಗ್ರಾಮದಲ್ಲಿ ಜರುಗಿದೆ. ಶಿವಬಸಪ್ಪ ಶಿವಮೂರ್ತೆಪ್ಪ ಸುಳ್ಳಳ್ಳಿ (42) ಮೃತ ರೈತ. ಕೂಸನೂರ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದ. ಶಿವಬಸಪ್ಪ ಕೃಷಿಗಾಗಿ ತೆಗೆದುಕೊಂಡಿದ್ದ ಟ್ರ್ಯಾಕ್ಟರ್ ಸಾಲದ ಹಿನ್ನೆಲೆಯಲ್ಲಿ ಕಳೆದ 5 ತಿಂಗಳ ಹಿಂದ ಮಾರಾಟ ಮಾಡಿದ್ದರು. 2 ಎಕರೆಯಲ್ಲಿ 2 ವರ್ಷದಿಂದ ಅಡಕೆ ಗಿಡ ಬೆಳೆದಿದ್ದರು. ಹೊಲದಲ್ಲಿನ ಬೋರ್ವೆಲ್ನಲ್ಲಿ ನೀರು ಬಾರದೆ ಸ್ಥಗಿತವಾಗಿತ್ತು. ಸಾಲ ಮತ್ತು ಬೆಳೆಗಳ ಪರಿಸ್ಥಿತಿಯಿಂದ ಬೇಸತ್ತು ಮಂಗಳವಾರ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.