ಕಿರುಕುಳಕ್ಕೆ ನೊಂದು ರೈತ ಆತ್ಮಹತ್ಯೆ

15-RNR-07- farmer death
Published on

ರಾಣೆಬೆನ್ನೂರ: ಖಾಸಗಿ ಫೈನಾನ್ಸ್​ನವರ ಕಿರುಕುಳದಿಂದ ಹಾಗೂ ಬೆಳೆ ಹಾನಿಯಿಂದ ನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಘಟನೆ ತಾಲೂಕಿನ ಮೇಡ್ಲೇರಿ ತಾಂಡಾದಲ್ಲಿ ಶುಕ್ರವಾರ ಸಂಭವಿಸಿದೆ.


ತಾಂಡಾದ ಕುಬೇರಪ್ಪ ಠಾಕ್ರೇಪ್ಪ ಲಮಾಣಿ (45) ಮೃತ ರೈತ.
ಇವರು ಖಾಸಗಿ ಫೈನಾನ್ಸ್​ನಲ್ಲಿ 1.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಅದು ಬಡ್ಡಿ ಸೇರಿ 4.82 ಲಕ್ಷ ರೂ. ಆಗಿತ್ತು. ಆದರೆ, ಇವರು ಸಾಲ ತುಂಬದ ಕಾರಣ ಖಾಸಗಿ ಫೈನಾನ್ಸ್​ನವರು ಪ್ರಕರಣ ದಾಖಲಿಸಿದ್ದರು. ಇದರಿಂದ ಮನನೊಂದ ರೈತ ಕುಬೇರಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರೈತ ಸಂಘದಿಂದ ಮನವಿ ಸಲ್ಲಿಕೆ: ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಖಾಸಗಿ ಫೈನಾನ್ಸ್​ನವರ ಕಿರುಕುಳ ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಹನುಮಂತಪ್ಪ ಕಬ್ಬಾರ, ದಿಳ್ಳೇಪ್ಪ ಲಮಾಣಿ, ಬೀರಪ್ಪ ಲಮಾಣಿ, ಕುಮಾರ ಸಾನೇಪ್ಪ, ಸುರೇಶ ಲಮಾಣಿ, ಮೂರ್ತೆಪ್ಪ ಲಮಾಣಿ, ಚಂದ್ರು ಲಮಾಣಿ, ಸೋಮಲೇಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net