ಸಾಲದ ಭಾದೆ ತಾಳಲಾರದೆ ರೈತ ಆತ್ಮಹತ್ಯೆ

8 nrp 3 (1)
ಸಂದೇಶ
Published on

ಎನ್.ಆರ್.ಪುರ: ಸಾಲ ಭಾದೆ ತಾಳಲಾರದೆ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ರೈತ ಹಂದುಗುಣಿಯ ಸಂದೇಶ(45) ಭಾನುವಾರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ತೋಟದಲ್ಲಿ ನೀರು ಬಿಡಲು ಸ್ಪಿಂಕ್ಲರ್ ಜೆಟ್ ಬದಲಾಯಿಸಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಾಸು ಬರಲಿಲ್ಲ. ಬೆಳಗ್ಗೆ ತೋಟಕ್ಕೆ ಹೋಗಿ ನೋಡಿದಾಗ ಸಂದೇಶ್ ತೋಟದ ಕೆರೆ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಂದೇಶ ತೋಟದ ಅಭಿವೃದ್ಧಿಗಾಗಿ ಬ್ಯಾಂಕ್, ಸೊಸೈಟಿ ಹಾಗೂ ಇತರ ಸಂಘ, ಸಂಸ್ಥೆಗಳಲ್ಲಿ ಸಾಲ ಮಾಡಿಮಾಡಿದ್ದು ಇದನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ಸುಂದರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net