

ಬೆಂಗಳೂರು: ಸರ್ಕಾರದಿಂದ ಬಿಬಿಎಂಪಿ ಡಿ ಲಿಮಿಟೇಷನ್ಗೆ ಒಪ್ಪಿಗೆ ನೀಡಿದ್ದು, ಅನುಮೋದನೆ ಪತ್ರದಲ್ಲಿ ಆರ್ಆರ್ ನಗರ ವಿಧಾನಸಭಾ ಕ್ಷೇತ್ರವೇ ಹೈಲೆಟ್ ಆಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 9 ವಾರ್ಡ್ಗಳಿದ್ದವು. ವಾರ್ಡ್ ವಿಂಗಡಣೆ ಬಳಿಕ ಒಟ್ಟು 14 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಇದರಲ್ಲಿ 9 ವಾರ್ಡ್‌ಗಳಿಗೆ ಇತಿಹಾಸ ಪ್ರಸಿದ್ಧ ಹೆಸರುಗಳನ್ನು ಬಿಬಿಎಂಪಿ ಇಟ್ಟಿದೆ.
ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ಹೊಸ ವಾರ್ಡ್ಗಳ ವರದಿಯ ಕರಡು ಪ್ರತಿಯಲ್ಲಿ ಹೊಸ ಹೆಸರಗಳನ್ನು ಉಲ್ಲೇಖಿಸಲಾಗಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ವಾರ್ಡ್ ಸಂಖ್ಯೆ 36ರಿಂದ 49ರ ವರೆಗೂ ಸೇರ್ಪಡೆಯಾಗಿದೆ. ಅವುಗಳ ವಿಶೇಷ ಹೆಸರುಗಳು ಹೀಗಿವೆ...
ವಾರ್ಡ್ ನಂ.36 - ಕನ್ನೇಶ್ವರರಾಮ
ವಾರ್ಡ್ ನಂ.37 - ವೀರಮದಕರಿ
ವಾರ್ಡ್ ನಂ.38 - ಜೆಪಿ ಪಾರ್ಕ್
ವಾರ್ಡ್ ನಂ.39 - ಚಾಣಕ್ಯ
ವಾರ್ಡ್ ನಂ.40 - ಛತ್ರಪತಿ ಶಿವಾಜಿ
ವಾರ್ಡ್ ನಂ.41 - ಪೀಣ್ಯ
ವಾರ್ಡ್ ನಂ.42 - ಲಕ್ಷ್ಮೀದೇವಿನಗರ
ವಾರ್ಡ್ ನಂ.43 - ರಣಧೀರ ಕಂಠೀರವ
ವಾರ್ಡ್ ನಂ.44 - ವೀರಸಿಂಧೂರ ಲಕ್ಷ್ಮಣ
ವಾರ್ಡ್ ನಂ.45 - ವಿಜಯನಗರ ಕೃಷ್ಣದೇವರಾಯ
ವಾರ್ಡ್ ನಂ.46 - ಸರ್ ಎಂ.ವಿಶ್ವೇಶ್ವರಯ್ಯ
ವಾರ್ಡ್ ನಂ.47- ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್
ವಾರ್ಡ್ ನಂ.48 - ಜ್ಞಾನಭಾರತಿ
ವಾರ್ಡ್ ನಂ.49 - ರಾಜರಾಜೇಶ್ವರಿ ನಗರ