ಕೌಟುಂಬಿಕ ಕಲಹ: ಪಾವಗಡದಲ್ಲಿ ತಾಯಿ-ಇಬ್ಬರು ಮಕ್ಕಳು ಆತ್ಮಹತ್ಯೆ

death
Published on

ತುಮಕೂರು: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿ ತಾಂಡದಲ್ಲಿ ಸಂಭವಿಸಿದೆ.

ವೆಂಕಟೇಶ್ ಅವರ ಪತಿ ಬುಜ್ಜಿ ಬಾಯಿ(35), ಇವರ ಮಕ್ಕಳಾದ ಖುಷಿ(9) ಮತ್ತು ಹರ್ಷಿತ(6) ಮೃತ ದುರ್ದೈವಿಗಳು. ವೆಂಕಟೇಶ್ ಹಾಗೂ ಬುಜ್ಜಿಬಾಯಿ ಇಬ್ಬರ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಕುಡಿದು ಬಂದು ಪತ್ನಿ ಜತೆ ವೆಂಕಟೇಶ್ ಗಲಾಟೆ ಮಾಡಿದ್ದ.

ಇದರಿಂದ ಮನನೊಂದ ಬುಜ್ಜಿಬಾಯಿ, ತನ್ನಿಬ್ಬರು ಮಕ್ಕಳ ಜತೆ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಿರುಮಣಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net