ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು MLCಗೆ ಬೆದರಿಕೆ ಹಾಕಿದ್ದ ಆರೋಪಿ ಬಾಗಲಕೋಟೆಯಲ್ಲಿ ಸಿಕ್ಕಿಬಿದ್ದ

New Project(12)
Published on

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಬಳಿಕ ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿಧಾನ ಪರಿಷತ್​ ಸದಸ್ಯ ಡಿ.ಎಸ್​.ಅರುಣ್​ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ ಶಿಂದಿಕುರಬೆಟ್​ನ ಸಿದ್ಧಾರೂಢ ಶ್ರೀಕಾಂತ್​ ನೇರಲಿ(31) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಫೆ.21ರಂದು ಪ್ರಚೋದನಾಕಾರಿ ಪೋಸ್ಟ್​ ಮಾಡಿದ್ದ ಆರೋಪದಲ್ಲಿ ಸಿದ್ಧಾರೂಢನನ್ನು ಬಾಗಲಕೋಟೆ ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು ಮುಸ್ತಾಕ ಅಲಿ ಹೆಸರಲ್ಲಿ ಬೆದರಿಕೆ ಪೋಸ್ಟ್​ ಹಾಕಿದ್ದ. ಅದೇ ಪೋಸ್ಟ್​ಗೆ ಸಂಬಂಧಿಸಿದಂತೆ ಶಿವಮೊಗ್ಗ ಸೈಬರ್​ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಬಾಗಲಕೋಟೆ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net