ಹನುಮನಕೊಪ್ಪದಲ್ಲಿ ಶ್ರೀ ಅಂಬಾಭವಾನಿ ಸಂಭ್ರಮದ ಜಾತ್ರೆ

Published on

ಉಪ್ಪಿನಬೆಟಗೇರಿ: ಜೈ ಶಿವಾಜಿ, ಜೈ ಭವಾನಿ ಎಂಬ ಜಯ ಘೊಷಗಳು ಕೇಳಿ ಬರುತ್ತಿದ್ದಂತೆ ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಭಂಡಾರ ಎರಚುತ್ತ ಸಂಭ್ರಮಿಸುತ್ತಿರುವ ದೃಶ್ಯ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಕಂಡು ಬಂದಿತು.

ಹನುಮನಕೊಪ್ಪದ ಮರಾಠಾ ಗಲ್ಲಿಯಲ್ಲಿರುವ ಶ್ರೀ ಅಂಬಾಭವಾನಿ ಜಾತ್ರೆ ಅಂಗವಾಗಿ ಶುಕ್ರವಾರ ಬೆಳಗ್ಗೆ ಅರ್ಚಕರಿಂದ ದೇವಿಗೆ ರುದ್ರಾಭಿಷೇಕ, ಪಂಚಾಭಿಷೇಕ ಸೇರಿ ಹಲವು ಬಗೆಯ ಪೂಜಾ ಕೈಂಕರ್ಯ ಜರುಗಿದವು.

ನಂತರ ಸುಂದರವಾಗಿ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಶ್ರೀ ಅಂಬಾಭವಾನಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ಉಪ್ಪಿನಬೆಟಗೇರಿ ಹಾಗೂ ಹನುಮನಕೊಪ್ಪ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು.

ಡೊಳ್ಳು ಬಡಿತ, ಭಜನೆ ಸೇರಿ ವಿವಿಧ ವಾದ್ಯಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಮಹಿಳೆಯರು ಮತ್ತು ಮಕ್ಕಳು ಆರತಿ ತಟ್ಟೆಗಳೊಂದಿಗೆ ಪಾಲ್ಗೊಂಡಿದ್ದರು. ಪಲ್ಲಕ್ಕಿಯು ಮರಳಿ ದೇವಸ್ಥಾನಕ್ಕೆ ಆಗಮಿಸಿದ ನಂತರ ಭಕ್ತರಿಗೆ ಅನ್ನಪ್ರಸಾದ ಜರುಗಿತು. ಜ್ಯೋತೆಪ್ಪ ಜಾಧವ, ನಾಗರಾಜ ಹಾರೋಬೆಳವಡಿ, ದೇವೇಂದ್ರ ಜಾಧವ, ಶಿವಾನಂದ ಹಟ್ಟಿ, ಶೇಖಪ್ಪ ಜಾಧವ, ಸುರೇಶಬಾಬು ತಳವಾರ, ಅರ್ಜುನ ಜಾಧವ, ಕೃಷ್ಣಾ ಚವ್ಹಾಣ, ಕಲ್ಲಪ್ಪ ಬೊಬ್ಬಿ, ಧರೆಪ್ಪ ಬೊಬ್ಬಿ, ಕಲ್ಲಪ್ಪ ಹಟ್ಟಿ, ಕಾಶಪ್ಪ ದೊಡವಾಡ, ತೀರ್ಥಪ್ಪ ಜಾಧವ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net