ಅಬ್ಬಬ್ಬಾ! ತಡೆಗೋಡೆಯನ್ನೇ ದಾಟಿದ ಗಜರಾಜ, ವಿಡಿಯೋ ವೈರಲ್

1190732
Published on

ಚಾಮರಾಜನಗರ: ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ ಅಡೆತಡೆಗಳನ್ನ ಒಡ್ಡಿದರೂ 'ಆನೆ ನಡೆದದ್ದೇ ದಾರಿ' ಎನ್ನುವುದಕ್ಕೆ ಮತ್ತೆ ಸಾಕ್ಷಿ ದೊರೆತಿದೆ.

ಅರಣ್ಯದಲ್ಲಿ‌ ಅಳವಡಿಸಿರುವ ರೈಲ್ವೆ ಬ್ಯಾರಿಗೇಟ್ ಅನ್ನು ಕಾಡಾನೆಯೊಂದು‌ ದಾಟಿ ಹೋಗುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ಚಾಣಾಕ್ಷ ಆನೆ ದಾಟುತ್ತಿರುವ ದೃಷ್ಯ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಅಂದಹಾಗೇ ಆನೆ ಬ್ಯಾರಿಗೇಟ್ ದಾಟುವ ಘಟನೆ ಬಂಡೀಪುರದಲ್ಲಿ ನಡೆದಿದೆ ಎನ್ನಲಾಗಿತ್ತು. ಆದರೆ ಇದು ನಾಗರಹೊಳೆಯ ವೀರನಹೊಸಹಳ್ಳಿಯದ್ದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net