ಮೊಳಕಾಲ್ಮೂರು: ಕಾವೇರಿ ನೀರಿಗಾಗಿ ವಿವಿಧ ಪ್ರಗತಿಪರ ಸಂಘಟನೆಗಳು ರಾಜ್ಯಾದ್ಯಂತ ನೀಡಿದ್ದ ಬಂದ್ ಕರೆಗೆ ಪಟ್ಟಣದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಎಂದಿನಂತೆ ಸಹಜ ವಾತಾವರಣ ಕಂಡುಬಂದಿತು.
ಬಸ್, ಆಟೋಗಳ ಸಂಚಾರ ಎಂದಿನಂತೆ ಮಾಮೂಲಾಗಿತ್ತು. ಅಂಗಡಿ-ಮುಂಗಟ್ಟುಗಳ ವ್ಯಾಪರ ವಹಿವಾಟು ಸಹಜವಾಗಿ ನಡೆಯಿತು.
ರೈತ ಸಂಘ, ಕಾರ್ಮಿಕ ಸಂಘಟನೆ ಹಾಗೂ ಕಸಾಪ ಪರಿಷತ್ ಪದಾಧಿಕಾರಿಗಳು ತಾಲೂಕು ಆಡಳಿತ ಮುಂಭಾಗದಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ರೈತ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ, ಸಿಪಿಐ ಸಂಘಟನೆ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್, ವಕೀಲ ರಾಜಶೇಖರನಾಯಕ, ರಾಜಣ್ಣ, ಎಚ್.ಟಿ.ಚಂದ್ರಣ್ಣ, ಮಂಜುನಾಥ, ಕನಕ ಶಿವಮೂರ್ತಿ, ನಾಗರಾಜ್, ತಮ್ಮಣ್ಣ, ವೆಂಕಟೇಶ್, ಈರಣ್ಣ ಮೊದಲಾದವರು ಇದ್ದರು.