ಮಂತ್ರಾಕ್ಷತೆ ವಿತರಿಸುವ ಕಾರ್ಯಕ್ಕೆ ಚಾಲನೆ

07-GPT-3
ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಿರಂಜನಕುಮಾರ್ ನೇತೃತ್ವದಲ್ಲಿ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು. ಜಗದೀಶ, ರವಿ, ಕೃಷ್ಣ, ನಾಗಶೆಟ್ಟಿ ಇದ್ದರು.
Published on

ಗುಂಡ್ಲುಪೇಟೆ: ಶ್ರೀರಾಮನ ಮಹಾ ಸಂಪರ್ಕ ಅಭಿಯಾನ ಅಂಗವಾಗಿ ಮಂತ್ರಾಕ್ಷತೆ ವಿತರಿಸುವ ಕಾರ್ಯಕ್ಕೆ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ತಾಲೂಕಿನ ಬೇಗೂರಿನಲ್ಲಿ ಭಾನುವಾರ ಚಾಲನೆ ನೀಡಿದರು.

ಕಾರ್ಯಕರ್ತರು ಹಾಗೂ ಮುಖಂಡರ ಜತೆಗೂಡಿ ಗ್ರಾಮದ ಪ್ರತಿ ಮನೆಗೆ ತೆರಳಿ ಮಂತ್ರಾಕ್ಷತೆ, ಆಹ್ವಾನ ಪತ್ರಿಕೆ ಹಾಗೂ ರಾಮನ ಭಾವಚಿತ್ರ ವಿತರಿಸಿದರು. ಜ.22ರಂದು ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಸಹಕಾರ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ಮಂಡಲಾಧ್ಯಕ್ಷ ಜಗದೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಮರಹಳ್ಳಿ ರವಿ, ಹೊರೆಯಾಲ ಕೃಷ್ಣ, ನಂಜುಂಡಸ್ವಾಮಿ, ನಾಗಶೆಟ್ಟಿ, ರಾಜಶೆಟ್ಟಿ, ಮಹೇಶ್, ಅಣ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net