

ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಪತ್ರಕರ್ತ ಟಿ. ಗುರುರಾಜ್ ಮಾತನಾಡಿ, ಕನಕದಾಸರು ಸಮ ಸಮಾಜದ ಕನಸುಗಾರ. ದೊರೆತನ ಹಾಗೂ ಸಿರಿತನ ತೊರೆದು ಸಮಾಜದ ಕಷ್ಟಗಳಿಗೆ ಸ್ಪಂದಿಸಲು ಸರಳ ಬದುಕಿಗೆ ಬದಲಾದರು. ಸಮಾಜದಲ್ಲಿ ಬೇರೂರಿದ್ದ ಅಂಧಕಾರ ಮತ್ತು ಅಸಮಾನತೆಯನ್ನು ದೂರ ಮಾಡಲು ಶ್ರಮಿಸಿದರು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಡಿ.ರವಿ ಮಾತನಾಡಿ, ಕನಕದಾಸರು ತಮ್ಮ ವಚನ, ಕೀರ್ತನೆ ಮತ್ತು ಪದಗಳ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದರು. ತಾರತಮ್ಯ ರಹಿತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಶಿವಕುಮಾರ್, ಖಜಾಂಚಿ ಡಾ. ದೀಪಾ ಹೆಬ್ಬಾರ್ ಇತರರಿದ್ದರು.