ಒಂದೊಂದು ಕಾಲೇಜು ತಂಡದಿಂದ ನಾಟಕ ಪ್ರದರ್ಶನ

Drama-games
Published on

ಮೈಸೂರು: ರಂಗಾಯಣದ ಅಂಗಳದಲ್ಲಿ ಗುರುವಾರ ಉದ್ಘಾಟನೆಯಾದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವದ ಅಂಗವಾಗಿ ಭೂಮಿಗೀತ ರಂಗ ವೇದಿಕೆಯಲ್ಲಿ ಅ.11ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಒಂದೊಂದು ಕಾಲೇಜು ತಂಡದಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.


6 ರಂದು ಅಮೃತಾ ವಿದ್ಯಾಪೀಠಂ ವತಿಯಿಂದ ‘ಪರಿಜು’, 7 ರಂದು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ‘ರೂಪರೂಪಗಳನು ದಾಟಿ’, 8 ರಂದು ಎಂಎಂಕೆಎಸ್‌ಡಿಎಂ ಮಹಿಳಾ ಮಹಾಸಭಾದ ವತಿಯಿಂದ ‘ಒಥೆಲೋ’, 9 ರಂದು ಹುಣಸೂರಿನ ಲಾ ಸಲೆಟ್ ಪದವಿಪೂರ್ವ ಕಾಲೇಜು ವತಿಯಿಂದ ‘ಕೂಳಿನ ಕಾಳಗ’, 10 ರಂದು ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ‘ತುಘಲಕ್’ ಹಾಗೂ 11 ರಂದು ಹುಣಸೂರಿನ ಟ್ಯಾಲೆಂಟ್ ಎಜುಕೇಷನ್ ಟ್ರಸ್ಟ್ ವತಿಯಿಂದ ‘ಹುಲಿಯ ನೆರಳು’ ನಾಟಕ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net