ಚಿರತೆ ದಾಳಿಗೆ ನಾಯಿ ಬಲಿ

Oplus_131072
Oplus_131072
Published on

ನಂಜನಗೂಡು: ತಾಲೂಕಿನ ನೇರಳೆ ಗ್ರಾಮದ ಭಾಗ್ಯ ಅವರ ಜಮೀನಿನಲ್ಲಿ ಇತ್ತೀಚೆಗೆ ಚಿರತೆ ದಾಳಿ ಮಾಡಿ ಸಾಕು ನಾಯಿಯನ್ನು ಬಲಿ ಪಡೆದಿದೆ.

ಕವಲಂದೆ, ಹೆಡತಲೆ, ಹೆಮ್ಮರಗಾಲ, ಸಿಂಧುವಳ್ಳಿ, ಹುಣಸನಾಳು ಸೇರಿದಂತೆ ಸುತ್ತಮುತ್ತ ಪ್ರದೇಶಗಳ ಜಮೀನಿನಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದ್ದು, ಸಾಕು ನಾಯಿಗಳು, ದನಕರುಗಳು, ಕುರಿ- ಮೇಕೆಗಳನ್ನು ಬಲಿ ಪಡೆಯುತ್ತಿವೆ.

ತಾಲೂಕಿನ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬೋನುಗಳ ಕೊರತೆ ಇರುವ ಕಾರಣ ಚಿರತೆಯನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚುವರಿ ಬೋನುಗಳನ್ನು ಇಟ್ಟು ಸೆರೆ ಹಿಡಿಯುವತ್ತ ಗಮನಹರಿಸಿ ರೈತರಿಗೆ ಉಂಟಾಗಿರುವ ಆತಂಕವನ್ನು ಕಡಿಮೆ ಮಾಡಬೇಕೆಂದು ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net