ಡಾಂಬರ್​ನಲ್ಲಿ ಸಿಲುಕಿಕೊಂಡಿದ್ದ ನಾಯಿಯ ರಕ್ಷಣೆ...

Dog Lead
Published on

ಮಾನವೀಯತೆ ಮೆರೆದ ವಿಶು ಶೆಟ್ಟಿ

ಸಹಕರಿಸಿದ ಹರೀಶ್​ ಉದ್ಯಾವರ

ವಿಜಯವಾಣಿ ಸುದ್ದಿಜಾಲ ಉಡುಪಿ

ರಸ್ತೆಯಲ್ಲಿ ಚೆಲ್ಲಿದ್ದ ಡಾಂಬರ್​ನಲ್ಲಿ ಸಿಲುಕಿಕೊಂಡು, ಮೇಲೇಳಲು ಆಗದೆ ಅಸಹಾಯಕ ಸ್ಥಿತುಯಲ್ಲಿದ್ದ ನಾಯಿಯೊಂದನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಹರೀಶ್​ ಉದ್ಯಾವರ ಅವರು ಬಹಳ ಶ್ರಮದಿಂದ ರಕ್ಷಿಸಿದಾರೆ.

ಆದಿಉಡುಪಿಯ ಸಂತೆ ಮಾರ್ಕೆಟ್​ ಬಳಿ ಇದ್ದ ಡಾಂಬರ್​ ಗೋದಾಮಿನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್​ ಸೋರಿಕೆಯಾಗಿ ಸುತ್ತಮುತ್ತ ಪಸರಿಸಿತ್ತು. ಆ ರಸ್ತೆ ಮಾರ್ಗದಲ್ಲಿ ಬಂದ ನಾಯಿಯೊಂದು ತಿಳಿಯದೇ ಸೋರಿಕೆಯಾದ ಡಾಂಬರ್​ನಲ್ಲಿ ಬಿದ್ದು, ದೇಹಪೂರ್ತಿ ಅಂಟಿಕೊಂಡಿದ್ದರಿಂದ ಮೇಲೆ ಏಳಲಾಗದೆ ಮೂರ್ನಾಲ್ಕು ದಿನದಿಂದ ಅಲ್ಲಿಯೇ ಒದ್ದಾಡುತ್ತಿತ್ತು.

ಮಾಹಿತಿ ತಿಳಿದ ವಿಶುಶೆಟ್ಟಿ ಹಾಗೂ ಹರೀಶ್​ ಉದ್ಯಾವರ ಅವರು ಸ್ಥಳಕ್ಕೆ ಆಗಮಿಸಿ, ಡಬ್ಬಿಗಳ ನಡುವೆ ಡಾಂಬರ್​ನಲ್ಲಿ ಸಿಲುಕಿದ್ದ ನಾಯಿಯ ರಕ್ಷಣಾ ಕಾರ್ಯಾಚರಣೆ ನಡೆಸಿದರು. ನೆಲಕ್ಕೆ ಡಾಂಬರ್​ ಚೆಲ್ಲಿ ಗಟ್ಟಿಯಾಗಿದ್ದ ಡಬ್ಬಿಯನ್ನು ವಾಹನಕ್ಕೆ ಕಟ್ಟಿ ಎಳೆದು, ನೆಲದಿಂದ ಬಿಡಿಸಿದರು. ಬಳಿಕ ನಾಯಿಯ ದೇಹದ ಸುತ್ತ ತೆಂಗಿನಎಣ್ಣೆ ಸುರಿದು ಅಂಟಿಕೊಂಡಿದ್ದ ಡಾಂಬರ್​ ತೆಗೆದು ನಾಯಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದರು.

ಡಾಂಬರ್​ ವ್ಯಾಪಾರಿಗಳು ಈ ರೀತಿ ರಸ್ತೆಯಲ್ಲಿ ಡಾಂಬರ್​ ಸೋರದಂತೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಹಾವು ಇನ್ನಿತರ ಮೂಕಪ್ರಾಣಿಗಳ ಜೀವಕ್ಕೆ ತೊಂದರೆ ಆಗಲಿದೆ. | ವಿಶು ಶೆಟ್ಟಿ, ಸಮಾಜ ಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net