ವಾಯು ವಿಹಾರಕ್ಕೆ ತೆರಳಿದ್ದವರ ಮೇಲೆ ನಾಯಿ ದಾಳಿ

24-kkr1(10-24
Published on

ಕಿಕ್ಕೇರಿ : ಗುರುವಾರ ಬೆಳ್ಳಂಬೆಳ್ಳಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ಜನರ ಮೇಲೆ ನಾಯಿ ದಾಳಿ ಮಾಡಿದೆ. ಬೂವಿನಹಳ್ಳಿಯ ಮೂಗಣ್ಣ ಸೇರಿದಂತೆ ನಾಲ್ಕೈದು ಜನರಿಗೆ ನಾಯಿ ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಳೆದ ತಿಂಗಳು ಹಲವು ನಾಯಿಗಳು ಚನ್ನನಕೊಪ್ಪಲು ಬಡಾವಣೆಯಲ್ಲಿ ಒಂದೆರಡು ಮಕ್ಕಳು, ಹಿರಿಯ ನಾಗರಿಕರ ಮೇಲೆ ನಾಯಿ ದಾಳಿ ಮಾಡಿತ್ತು. ಈಗ ಮತ್ತೆ ದಾಳಿ ಮಾಡಲು ಆರಂಭಿಸಿದೆ. ಈಚಿನ ದಿನಗಳಲ್ಲಿ ನಾಯಿಗಳ ಕಾಟ ವಿಪರೀತವಾಗಿದ್ದು, ಜನರು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ.

ಈ ಸಂಬಂದ ಪಿಡಿಒ ಚಲುವರಾಜ್ ಮಾತನಾಡಿ, ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net